ಈಗಿನ ನೀರೆಯರಿಗೆ ಸೀರೆ ಅಂದ್ರೆ ಸ್ಟೈಲಿಷ್ ಆಗಿ ಇರಬೇಕು. ಹಿಂದಿನ ಕಾಲದ ಹಾಗೆ ದಪ್ಪ ಪಿನ್ ಮಾಡಿಕೊಂಡು ಸೀರೆ ಉಡೋದು ಇಷ್ಟ ಇಲ್ಲ. ರಿಸೆಪ್ಷನ್ ಆಗಲಿ, ಫಂಕ್ಷನ್ ಆಗಲಿ, ಅಥವಾ ಇನ್ನೇನೆ ಆಗಿರಲಿ, ಈ ರೀತಿ ಕಾಟನ್ ಸೀರೆಗಳನ್ನು ಧರಿಸಿ. ಇವು ಇತರರಿಗಿಂತ ನಿಮ್ಮನ್ನು ಭಿನ್ನವಾಗಿಸುತ್ತದೆ. ಎಲ್ಲರಿಗಿಂತ ನೀವು ಸುಂದರವಾಗಿ, ಗಮನ ಸೆಳೆಯುತ್ತೀರಿ. ಯಾವ ರೀತಿ ನೋಡಿ..
ಸೀರೆಗೆ ಸದಾ ಜ್ಯುವೆಲರಿ ಬೇಕು ಎಂದಿಲ್ಲ. ನೀವು ಧರಿಸುವ ಸೀರೆಯನ್ನು ಗಮನಿಸಿ ಅದಕ್ಕೆ ತಕ್ಕಂತಹ ಜ್ಯುವೆಲ್ಸ್ ಹಾಕಿ, ಮಿನಿಮಲ್ ಜಿವೆಲರಿ ಹಾಕೋದು ಹೊಸ ಟ್ರೆಂಡ್.
ಸೀರೆಗಳು ಎಷ್ಟು ಮುಖ್ಯವೋ ಬ್ಲೌಸ್ ಕೂಡ ಅಷ್ಟೇ ಮುಖ್ಯ. ಸೀರೆ ಸಿಂಪಲ್ ಆಗಿದ್ದರೆ ಬ್ಲೌಸ್ ಗ್ರಾಂಡ್ ಆಗಿರಲಿ.
ಸೀರೆಗಳಿಗೆ ಬರೀ ಟ್ರಡಿಷನಲ್ ಲುಕ್ ಬೇಡ. ಈ ರೀತಿ ಮಾಡರ್ನ್ ಲುಕ್ ನಿಮ್ಮದಾಗಿಸಿ.
ಅದೇ ಬಣ್ಣದ ಸೀರೆಗೆ ಅದೇ ಬಣ್ಣದ ಬ್ಲೌಸ್ ಬೇಡ. ಹೆಚ್ಚೆಚ್ಚು ಕಾಂಟ್ರಾಸ್ಟ್ ಬಣ್ಣದ ಬ್ಲೌಸ್ ಪ್ರಿಫರ್ ಮಾಡಿ, ಸ್ಲೀವ್‌ಲೆಸ್ ಆಪ್ಷನ್ ತುಂಬಾ ಆಕರ್ಷಕವಾಗಿ ಕಾಣುತ್ತದೆ.