ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ವಿರುದ್ಧವಾಗಿ ಯಾರೇ ನಿಂತರೂ ತಮಿಳುನಾಡು ಚುನಾವಣೆಯಲ್ಲಿ ಗೆಲ್ಲುವುದು ಡಿಎಂಕೆ ಮಾತ್ರ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭರವಸೆ ವ್ಯಕ್ತಪಡಿಸಿದ್ದಾರೆ.
2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ವಿಜಯ್ ಗೆ ಎಚ್ಚರಿಕೆ ನೀಡಿದ್ದಾರೆ.
ನಟ ವಿಜಯ್ ಅಕ್ಟೋಬರ್ 27 ರಂದು ಹೊಸದಾಗಿ ಪ್ರಾರಂಭಿಸಲಾದ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ ಉದ್ಘಾಟನಾ ಸಮಾವೇಶವನ್ನು ನಡೆಸಿದರು. ಈ ವೇಳೆ ಉದ್ಘಾಟನಾ ಸಮಾರಂಭದಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಭಾಷಣವನ್ನು ಮಾಡಿದರು. ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಬಿಜೆಪಿಯನ್ನು ಹೆಸರಿಸದೆ ಪಕ್ಷದ ವಿರುದ್ಧ ಮಾತನಾಡಿದ್ದರು.
ಅದಕ್ಕೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಯಾವುದೇ ಮೈತ್ರಿ ಮಾಡಿಕೊಂಡರೂ ಡಿಎಂಕೆಯೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.