ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರದ ಬಗ್ಗೆ ಇಡೀ ಸಿನಿರಂಗಕ್ಕೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಜೇಮ್ಸ್ ಚಿತ್ರ ದೊಡ್ಡ ಮಟ್ಟದ ದಾಖಲೆ ಮಾಡುವ ಸೂಚನೆ ಇದ್ದು, ಪುನೀತ್ ಹುಟ್ಟುಹಬ್ಬದ ದಿನದಂದು ಚಿತ್ರ ತೆರೆ ಮೇಲೆ ಬರಲಿದ್ದು, ಅಪ್ಪುವನ್ನು ಸೈನಿಕನಂತೆ ಕಾಣಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಇನ್ನು ಚಿತ್ರದ ಬಿಡುಗಡೆಗೂ ಮುನ್ನ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ನಡೆಸುತ್ತಿದ್ದು, ನಾಳೆ ಅಂದ್ರೆ ಮಾ.13 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಲ್ಲಿ ಅದ್ಧೂರಿಯಾಗಿ ನಡೆಸೋಕೆ ಚಿತ್ರತಂಡ ನಿರ್ಧರಿಸಿದೆ.
ಈ ಅದ್ಧೂರಿ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್, ಶ್ರೀ ಮುರಳಿ, ವಿನಯ್ ರಾಜ್ ಕುಮಾರ್ ಇವೆಂಟ್ ನ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಚಿತ್ರದ ಟೀಸರ್, ಟ್ರೇಡ್ ಮಾರ್ಕ್, ಲಿರಿಕಲ್ ಸಾಂಗ್ ಅನ್ನು ಬಿಡುಗಡೆ ಮಾಡಿ ಯಶಸ್ಸು ಕಂಡ ಚಿತ್ರತಂಡ ಈಗ ಚಿತ್ರದ ಬಗ್ಗೆಯೂ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ. ಇನ್ನು ವಿಶ್ವದ್ಯಾಂತ 4 ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.