ಸಿಡುಬಿನ ಲಸಿಕೆಯನ್ನು ಲೆಕ್ಕ ತಪ್ಪಿ ಸಂಗ್ರಹಿಸಿವೆ ಶ್ರೀಮಂತ ದೇಶಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಅನ್ನೋ ಹೊತ್ತಲೇ ಇಡೀ ವಿಶ್ವವನ್ನೇ ಆವರಿಸಿಕೊಳ್ಳುತ್ತಿರುವ ಮಂಕಿಫಾಕ್ಸ್​ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಕೊರೊನಾ, ಡೆಲ್ಟಾ, ಡೆಲ್ಟಾ ಫ್ಲಸ್‌, ಬ್ಲ್ಯಾಕ್‌ ಫಂಗಸ್‌, ಝಿಕಾ ವೈರಸ್‌ ಹೀಗೆ ಕಳೆದರಡು ವರ್ಷ ಗಳಿಂದಲೂ ಜಗತ್ತು ಒಂದಿಲ್ಲೊಂದು ಅನಾರೋಗ್ಯಗಳಿಂದ ಬಳಲುತ್ತಿದೆ. ಇದೀಗ ಮಂಕಿಪಾಕ್ಸ್‌ ಸರದಿ. ದಿನದಿಂದ ದಿನಕ್ಕೆ ಮಂಕಿಫಾಕ್ಸ್ ಪ್ರಕರಣಗಳು ಏರುಗತಿಯಲ್ಲಿಯೇ ಸಾಗುತ್ತಿರುವುದು ಪಾಶ್ಯಾತ್ಯ ದೇಶಗಳಲ್ಲಿ ತೀವ್ರ ತಲ್ಲಣ ಹುಟ್ಟುಹಾಕಿದೆ.
ಮಂಕಿಪಾಕ್ಸ್ ಕಾಯಿಲೆಯನ್ನು ಅಂತರರಾಷ್ಟ್ರೀಯ ಕಾಳಜಿಯ ಆರೋಗ್ಯ ತುರ್ತುಸ್ಥಿತಿ ಎಂದು ಅಧಿಕೃತವಾಗಿ ಘೋಷಿಸುವ ಮುನ್ನವೇ, ಕೊಳ್ಳುಬಾಕ ಶ್ರೀಮಂತ ರಾಷ್ಟ್ರಗಳು ಈಗಾಗಲೇ ಭಾರೀ ಪ್ರಮಾಣದಲ್ಲಿ ಸಿಡುಬಿನ ಲಸಿಕೆ ದಾಸ್ತಾನು ಮಾಡಿಡುತ್ತಿವೆ. ಈ ಲಸಿಕೆಗಳು ಮಂಕಿಪಾಕ್ಸ್ ನಿಂದ ಶೇ.85 ಪ್ರತಿಶತದಷ್ಟು ರಕ್ಷಣೆ ನೀಡುತ್ತದೆ ಎನ್ನುತ್ತವೆ ಮೂಲಗಳು.
ಮಂಕಿಫಾಕ್ಸ್ ಸಿಡುಬಿನ ವಿರುದ್ಧ ಪರಿಣಾಮಕಾರಿ ಲಸಿಕೆ ತಯಾರಿಕಾ ಸಂಸ್ಥೆಯಾದ ಬವೇರಿಯನ್ ನಾರ್ಡಿಕ್, ಮಂಕಿಫಾಕ್ಸ್‌ ಹೆಚ್ಚಳ ಭೀತಿಯಿಂದ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಸಂಗ್ರಹಿಸುತ್ತಿರುವ ರಾಷ್ಟ್ರಗಳೊಂದಿಗೆ ಹಲವಾರು ಒಪ್ಪಂದಕ್ಕೆ (ಹೆಚ್ಚಿನವು ಗೌಪ್ಯವಾಗಿ) ಸಹಿ ಹಾಕಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.
ಜಾಗತಿಕ ದೈತ್ಯ ಅಮೆರಿಕ ಮಂಕಿಪಾಕ್ಸ್ ಲಸಿಕೆ ಅಭಿವೃದ್ಧಿಗೆ 1.5 ಮಿಲಿಯನ್ ಹೂಡಿಕೆ ಮಾಡಿದ್ದು, ಐದು ಲಕ್ಷ ಡೋಸ್‌ ಲಸಿಕೆಗಳನ್ನು ಸಂಗ್ರಹಿಸಲು ಮಂದಾಗಿದೆ.
ವಿಶ್ವದ ಹಣವಂತ ದೇಶಗಳು ಉತ್ಪಾದನೆಯಾಗುವ ಬಹುತೇಕ ಲಸಿಕೆಗಳನ್ನು ಸಂಗ್ರಹಿಸಿಡುತ್ತಿರುವುದು ಬಡದೇಶಗಳನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆ ಕಂಡಾಗಲೂ ಶ್ರೀಮಂತ ರಾಷ್ಟ್ರಗಳು ಭಾರೀ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಸಂಗ್ರಹಿಸಿಟ್ಟಿದ್ದವು. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಬಲಿಷ್ಠ ದೇಶಗಳು ಉತ್ಪಾದನೆಯಾಗುವ ಲಸಿಕೆಯ ಬಹುಭಾಗವನ್ನು ಪಡೆದುಕೊಂಡರೆ ವಿಶ್ವದಲ್ಲಿ ಅಸಮಾನತೆ ಏರ್ಪಡುವ ಕುರಿತಾಗಿ ಆತಂಕ ವ್ಯಕ್ತಪಡಿಸಿದೆ.
ಈ ಎಲ್ಲಾ ದೇಶಗಳು ತಮ್ಮ ಸಿಡುಬು ಲಸಿಕೆ ಮತ್ತು ಚಿಕಿತ್ಸಕ ದಾಸ್ತಾನುಗಳ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಲಸಿಕೆ ಕೊರೆತೆಯಿಂದ ಬಳಲುತ್ತಿರುವ ದೇಶಗಳೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದೆ. ಈ ಕರೆಗೆ ಶ್ರೀಮಂತ ರಾಷ್ಟ್ರಗಳು ಇನ್ನೂ ಉತ್ತರಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!