Wednesday, June 7, 2023

Latest Posts

ಚುನಾವಣೆಗೆ ಕೌಂಟ್‌ಡೌನ್: ಯುಪಿಐ ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಇನ್ನೇನು ಕೌಂಟ್‌ಡೌನ್ ಶುರುವಾಗಿದೆ. ಚುನಾವಣೆ ಸಮಯದಲ್ಲಿ ಜನರಿಗೆ ಹಣದ ಆಮಿಷ ಒಡ್ಡಿ ಮತ ಹಾಕಿಸಿಕೊಳ್ಳೋ ಪ್ರಯತ್ನ ನಡೆಯುತ್ತಲೇ ಇದ್ದು, ಈ ಬಗ್ಗೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

ಸದ್ದಿಲ್ಲದೇ ಅಭ್ಯರ್ಥಿಗಳು ಫೋನ್ ಪೇ, ಗೂಗಲ್ ಪೇ ಇನ್ನಿತರ ಯುಪಿಐ ಆಪ್‌ಗಳ ಮೂಲಕ ಹಣ ರವಾನೆ ಮಾಡುವ ಬಗ್ಗೆ ಆಯೋಗ ನಿಗಾ ಇಟ್ಟಿದೆ.

ಮತದಾರರನ್ನು ಸೆಳೆಯುಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದ್ದು, ಆನ್‌ಲೈನ್ ಪೇಮೆಂಟ್‌ಗಳ ಬಗ್ಗೆ ಗಮನ ಇಡಲು ಪ್ರತ್ಯೇಕ ತಂಡವನ್ನೇ ರಚನೆ ಮಾಡಲಾಗಿದೆ.

ಈಗಾಗಲೇ ಯುಪಿಐ ಹಣ ಟ್ರಾನ್ಸ್‌ಫರ್ ಆಪ್‌ಗಳ ಸಂಸ್ಥೆ ಜತೆ ಚುನಾವಣಾ ಆಯೋಗ ಮಾತುಕತೆ ನಡೆಸಿದ್ದು, ಪ್ರತಿದಿನದ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಯಾವುದೇ ವ್ಯಕ್ತಿಯಿಂದ ನಿರ್ದಿಷ್ಟ ಮೊತ್ತದ ಹಣ ಟ್ರಾನ್ಸ್‌ಫರ್ ಆಗುತ್ತಿದ್ದರೆ, ಅಂಥವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಲು ಆಯೋಗ ಮುಂದಾಗಿದೆ.

ಕ್ಯಾಶ್ ನೀಡಿದರೆ ತಿಳಿದುಬಿಡುತ್ತದೆ ಆದರೆ ಫೋನ್ ಪೇ, ಗೂಗಲ್ ಪೇ ಮಾಡಿದರೆ ತಿಳಿಯುವುದಿಲ್ಲ ಎನ್ನುವ ಕಾಲ ಹೋಗಿದ್ದು, ಡಿಜಿಟಲ್ ಪೇಮೆಂಟ್ ಮಾಡಿಯೂ ಸಿಕ್ಕಿಹಾಕಿಕೊಳ್ಳಬಹುದಾಗಿದೆ. ಅನುಮಾನ ಬಂದ ಅಕೌಂಟ್‌ಗಳ ಮೇಲೂ ತನಿಖೆ ನಡೆಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!