SHOCKING | ಹೈದರಾಬಾದ್‌ನ ಟಿಸಿಎಸ್ ಕಂಪನಿಗೆ ಬಾಂಬ್ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ಮಾದಾಪುರದ ಪ್ರಮುಖ ಸಾಫ್ಟ್‌ವೇರ್ ಕಂಪನಿ ಟಿಸಿಎಸ್‌ಗೆ ಬಾಮಬ್ ಬೆದರಿಕೆ ಕರೆ ಬಂದಿದ್ದು, ಆತಂಕ ಸೃಷ್ಟಿಯಾಗಿದೆ. ಟಿಸಿಎಸ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದು, ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಲ್ಲ ನೌಕರರನ್ನು ಮನೆಗೆ ಕಳುಹಿಸಲಾಗಿದೆ. ಪೊಲೀಸರು ತಕ್ಷಣವೇ ಬಾಂಬ್ ಸ್ಕ್ವಾಡ್ ಜೊತೆ ಕಂಪನಿ ತಲುಪಿದ್ದು, ತೀವ್ರ ಶೋಧ ನಡೆಸಿದ್ದಾರೆ. ವ್ಯಾಪಕ ತಪಾಸಣೆ ನಂತರ ಅಲ್ಲಿ ಬಾಂಬ್ ಇಲ್ಲ ಎಂದು ತಿಳಿದುಬಂದಿದ್ದು, ಆಡಳಿತ ಮಂಡಳಿ, ಸಂಸ್ಥೆಯ ಉದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬೆದರಿಕೆ ಕರೆ ಮಾಡಿದವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ, ಇದೇ ಕಂಪನಿಯಲ್ಲಿ ಆತ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!