May 31, 2026
Sunday, May 31, 2026
spot_img

ಐಪಿಎಲ್ ಫೈನಲ್‌ ಗೆ ಕೌಂಟ್‌ಡೌನ್ ಶುರು: ಆರ್‌ಸಿಬಿ ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿ.ಕೆ. ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಫೈನಲ್‌ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೆ ಏರಲು ಸಜ್ಜಾಗುತ್ತಿದೆ.ಇತ್ತ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ತಂಡಕ್ಕೆ ಶುಭಹಾರೈಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ,ಗುಜರಾತ್ ಟೈಟಾನ್ಸ್ ತಂಡ ನಡುವೆ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಇದು ಆರ್‌ಸಿಬಿಯ ಹೊಸ ಅಧ್ಯಾಯ

ಇತ್ತ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಪಿಎಲ್ ಫೈನಲ್‌ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭ ಕೋರಿದ್ದಾರೆ. ಹಾಲಿ ಚಾಂಪಿಯನ್ನರಿಗೆ ಶುಭಹಾರೈಕೆ. ಇದು ಆರ್‌ಸಿಬಿಯ ಹೊಸ ಅಧ್ಯಾಯ. ಪ್ರಥಮ ಮ್ಯಾಚ್‌ನಿಂದ ಫೈನಲ್‌ ಮ್ಯಾಚ್‌ವರೆಗೆ ಆರ್‌ಸಿಬಿ ತಂಡವು ಅತ್ಯಂತ ಶಿಸ್ತುಬದ್ದ, ಸಂಘಟಿತವಾದಂತಹ ಪ್ರದರ್ಶನವನ್ನು ತೋರಿದೆ. ಮತ್ತೊಮ್ಮೆ ಇಡೀ ಬೆಂಗಳೂರು ಹೆಮ್ಮೆ ಪಡುವಂತೆ ಮಾಡಿದೆ. ಲಕ್ಷಾಂತರ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವಂತೆ ಮಾಡಿದ್ದಾರೆ. ನಿಮ್ಮ ಫೈನಲ್‌ ಪಂದ್ಯಕ್ಕೆ ಶುಭ ಹಾರೈಕೆಗಳು. ಇಂದಿನ ಪಂದ್ಯವು ಮತ್ತೊಮ್ಮೆ ನಮ್ಮ ಬೆಂಗಳೂರಿಗೆ ವೈಭವವನ್ನು ಮರುಕಳಿಸುವಂತೆ ಮಾಡಲಿ ಹಾಗೂ ಕರ್ನಾಟಕದಾದ್ಯಂತ ಎಲ್ಲರೂ ಸಂಭ್ರಮ ಪಡುವಂತೆ ಆಡಿ ಎಂದು ಶುಭ ಹಾರೈಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !