May 31, 2026
Sunday, May 31, 2026
spot_img

ಆಡ್ತಾರಾ? ಬಿಡ್ತಾರಾ? ಫೈನಲ್‌ಗೂ ಮುನ್ನ ಸಾಲ್ಟ್ ಸಸ್ಪೆನ್ಸ್: RCB ಪ್ಲೇಯಿಂಗ್ XI ಬಗ್ಗೆ ರಜತ್ ಸುಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿಲ್ ಸಾಲ್ಟ್ ಆಡಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಈ ಪ್ರಶ್ನೆಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸ್ಪಷ್ಟ ಉತ್ತರ ನೀಡದೆ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಫಿಟ್ ಆಗಿದ್ದರೂ ಅಂತಿಮ ತೀರ್ಮಾನ ಬಾಕಿ

ಬೆರಳಿನ ಗಾಯದಿಂದ ಕೆಲವು ವಾರಗಳ ಕಾಲ ತಂಡದಿಂದ ದೂರ ಉಳಿದಿದ್ದ ಫಿಲ್ ಸಾಲ್ಟ್ ಈಗ ಮತ್ತೆ ಆರ್‌ಸಿಬಿ ಶಿಬಿರಕ್ಕೆ ಮರಳಿದ್ದಾರೆ. ಅಭ್ಯಾಸದಲ್ಲೂ ಭಾಗವಹಿಸಿರುವ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎನ್ನಲಾಗಿದೆ. ಆದರೂ ಫೈನಲ್ ಪಂದ್ಯಕ್ಕೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಇದನ್ನೂ ಓದಿ:

ಪಂದ್ಯಕ್ಕೂ ಮುನ್ನ ಮಾತನಾಡಿದ ರಜತ್ ಪಾಟಿದಾರ್, ತಂಡದ ಅಂತಿಮ ಸಂಯೋಜನೆ ಪಿಚ್ ಪರಿಸ್ಥಿತಿ ಹಾಗೂ ತಾಂತ್ರಿಕ ಲೆಕ್ಕಾಚಾರಗಳ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸಾಲ್ಟ್ ಫೈನಲ್‌ನಲ್ಲಿ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಸಾಲ್ಟ್ ಆಡದಿದ್ದರೆ ಯಾರಿಗೆ ಅವಕಾಶ?

ಒಂದು ವೇಳೆ ಸಾಲ್ಟ್ ಹೊರಗುಳಿದರೆ ಆರಂಭಿಕ ಬ್ಯಾಟರ್ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಮುಂದುವರಿಯುವ ಸಾಧ್ಯತೆ ಇದೆ. ಇತ್ತೀಚಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಉತ್ತಮ ಆರಂಭ ನೀಡಿದ್ದ ಅಯ್ಯರ್ ಮೇಲೆ ತಂಡದ ವಿಶ್ವಾಸ ಹೆಚ್ಚಾಗಿದೆ.

ವಿದೇಶಿ ಆಟಗಾರರ ಪಟ್ಟಿಯಲ್ಲಿ ಟಿಮ್ ಡೇವಿಡ್, ಜೋಶ್ ಹೇಝಲ್‌ವುಡ್, ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಡಫಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಫೈನಲ್‌ಗೂ ಮುನ್ನ ಆರ್‌ಸಿಬಿ ಶಿಬಿರದಲ್ಲಿ ಸಾಲ್ಟ್ ಕುರಿತ ನಿರ್ಧಾರವೇ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !