Saturday, August 20, 2022

Latest Posts

ಕನ್ನಡ ‘ಬಿಗ್ ಬಾಸ್ ಓಟಿಟಿ’ ಆರಂಭಕ್ಕೆ ಕ್ಷಣಗಣನೆ: ಬಹಿರಂಗವಾಯ್ತು ಮೊದಲ ಸ್ಪರ್ಧಿ ಯಾರೆಂದು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಜನಪ್ರಿಯ ರಿಯಾಲಿಟಿ ಶೋ, ಬಹುನಿರೀಕ್ಷಿತ ಬಿಗ್ ಬಾಸ್ ಒಟಿಟಿ (OTT) ಇಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದ್ದು, ಕ್ಷಣಗಣನೆ ಆರಂಭವಾಗಿದೆ.

ಕಲರ್ಸ್​ ಕನ್ನಡ ಚಾನಲ್​ನಲ್ಲಿ ಬಿಗ್ ಬಾಸ್ ಶೋ ಆರಂಭ ಆಗುತ್ತಿದೆ ಅಂದಾಗ ರಾಜ್ಯದ ಒಂದಷ್ಟು ವರ್ಗದ ಜನರು ಈ ಶೋ ಬಗ್ಗೆ ಹಾಗು ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ ಎಂಬುದರ ಕುರಿತು ಒಂದಿಷ್ಟು ಚರ್ಚೆಗಳು ನಡೆಯುತ್ತವೆ.

ಬಿಗ್​ ಬಾಸ್​ ಮನೆಗೆ ಕಿಚ್ಚ ಸುದೀಪ್​ ಆಗಮಿಸಿದ್ದು, ದೊಡ್ಮನೆಯಲ್ಲಿ ವಾಸುಕಿ ವೈಭವ್​ ಜತೆ ಒಂದು ಸುತ್ತು ಹೆಜ್ಜೆ ಹಾಕಿದ್ದಾರೆ.
ಆ ವಿಡಿಯೋ ಬಿಡುಗಡೆಯಾಗಿದ್ದು, ದೊಡ್ಮನೆ ನೋಡಿದ್ರೆ ವ್ಹಾವ್​… ಅನ್ನೋದು ಗ್ಯಾರಂಟಿ. ಇನ್ನು ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ ಎಂಟ್ರಿಯಾಗಿದ್ದಾರೆ.

ಸುದೀಪ್ ಸ್ಪರ್ಧಿಗಳನ್ನು ಪರಿಚಯಿಸಿ ಮನೆಗೆ ಕಳುಹಿಸಲಿದ್ದಾರೆ. ಈ ಕಾರ್ಯಕ್ರಮವು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ನೇರ ಪ್ರಸಾರವಾಗಲಿದ್ದು, 42 ದಿನಗಳ ಕಾಲ ಲೈವ್ ಆಗಿ ನೋಡಬಹುದು.

ಬಿಗ್ ಬಾಸ್ ಓಟಿಟಿ ಕನ್ನ’ದ ಮೊದಲ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ವಿಷಯ ಇನ್ನೂ ಬಹಿರಂಗವಾಗದಿದ್ದರೂ, ಒಂದಷ್ಟು ಹೆಸರುಗಳು ಕೇಳಿಬರುತ್ತಿತ್ತು. ಸೋನು ಗೌಡ, ಮುಖ್ಯಮಂತ್ರಿ ಚಂದ್ರು, ರೇಖಾ ದಾಸ್, ಸಾನ್ಯ ಅಯ್ಯರ್, ರಾಕೇಶ್ ಅಡಿಗ, ಟಿವಿ ನಿರೂಪಕ ಸೋಮಣ್ಣ ಮಾಚಿಮಾಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.

ಇದೀಗ ಆರ್ಯವರ್ಧನ್​ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಯಾರೆಂದು ಕೆಲವೇ ಕ್ಷಣದಲ್ಲಿ ಬಹಿರಂಗವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!