ಹೊಸ ವರ್ಷಾಚರಣೆಗೆ ಕೌಂಟ್​ಡೌನ್: ಬ್ರಿಗೇಡ್ ರೋಡ್, ಚರ್ಚ್​ ಸ್ಟ್ರೀಟ್ ನತ್ತ ಜನರ ಹೆಜ್ಜೆ!

ಹೊಸದಿಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆಗೆ (New Year 2024) ಕೌಂಟ್​ಡೌನ್ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಈಗಾಗಲೇ ಬ್ರಿಗೇಡ್ ರಸ್ತೆಯಲ್ಲಿ ಕಿಕ್ಕಿರುದು ಜನರು ತುಂಬಿದ್ದು, 12 ಗಂಟೆ ಅಷ್ಟರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಸದ್ಯ ಬ್ಯಾರಿಕೇಡ್​​ಗಳಿಂದ ಎಂ.ಜಿ.ರಸ್ತೆಯ ಪ್ರವೇಶದ್ವಾರ ಸಂಪೂರ್ಣ ಬಂದ್​ ಮಾಡಲಾಗಿದ್ದು, ವಾಹನಗಳ ಓಡಾಟ ಸಂಪೂರ್ಣ ನಿಷೇಧಿಸಲಾಗಿದೆ.

ಬ್ರಿಗೇಡ್ ರೋಡ್, ಚರ್ಚ್​ ಸ್ಟ್ರೀಟ್ ಎಂಟ್ರಿಯಾಗುವ ರಸ್ತೆ ಬಂದ್ ಮಾಡಿದ್ದು, ಸಾರ್ವಜನಿಕರ ಓಡಾಟಕ್ಕೆ ಅವಕಾಶ, ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಜೆ 6 ಗಂಟೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ಗೆ ಯುವ ಸಮೂಹ ಆಗಮಿಸುತ್ತಿದೆ. ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಆಗಮಿಸಿದ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಚರ್ಚ್​ಸ್ಟ್ರೀಟ್​ನ ಬಹುತೇಕ ಪಬ್​ಗಳ ಮುಂದೆ ಗ್ರಾಹಕರು ಕ್ಯೂನಿಂತಿದ್ದಾರೆ. ಮಾಸ್ಕ್ ಧರಿಸಿ, ಮುಖ ಮುಚ್ಚಿಕೊಂಡು ಕೆಲವರು ಓಡಾಡುತ್ತಿದ್ದಾರೆ.

ನಗರದಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಫೈರ್ ಕಿಟ್ ಬಳಕೆ ಮಾಡಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ತುರ್ತು ಅಗ್ನಿ ಅವಘಡದ ವೇಳೆ 10ಕ್ಕೂ ಹೆಚ್ಚು ಮೊಬೈಲ್ ಫೈರ್ ಕಿಟ್ ಬಳಕೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂ ಸಿಬ್ಬಂದಿಯ ನಿಯೋಜನೆ ಮಾಡಲಾಗಿದ್ದು, ವಿದ್ಯುತ್ ಸ್ಥಗಿತಗೊಂಡರೆ ತಕ್ಷಣ ಸ್ಥಳಕ್ಕೆ ತಂಡ ಧಾವಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!