November 9, 2026
Monday, November 9, 2026
spot_img

ಕೊಡಗಿನಲ್ಲಿ ಪುತ್ತರಿ ಸಂಭ್ರಮಕ್ಕೆ ದಿನಗಣನೆ; ನ.25ಕ್ಕೆ ಸುಗ್ಗಿ ಹಬ್ಬ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ‌ ಸುಗ್ಗಿ ಹಬ್ಬ ಹುತ್ತರಿ ಆಚರಣೆ ನ.25ರಂದು ನಡೆಯಲಿದೆ.

ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಪ್ರಸಿದ್ಧಿಯಾಗಿರುವ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರು ಹಾಗೂ ಅಮ್ಮಂಗೇರಿ ಜ್ಯೋತಿಷ್ಯರ ಸಮ್ಮುಖದಲ್ಲಿ ಪುತ್ತರಿ ಹಬ್ಬದ ಮುಹೂರ್ತ ನಿಗದಿಪಡಿಸಲಾಯಿತು.

ನ.25 ರಂದು ಬುಧವಾರ ರೋಹಿಣಿ ನಕ್ಷತ್ರದಲ್ಲಿ ಪುತ್ತರಿ ಹಬ್ಬದ ಆಚರಣೆ ನಡೆಯಲಿದ್ದು, ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಅಂದು ಸಂಜೆ 6.05ಗಂಟೆಗೆ ನೆರೆ ಕಟ್ಟುವುದು, 7.05 ಕದಿರು ತೆಗೆಯುವುದು ಹಾಗೂ ರಾತ್ರಿ 8.05ಕ್ಕೆ ಭೋಜನಕ್ಕೆ ಪ್ರಶಸ್ತ ಸಮಯವೆಂದು ನಿಗದಿಪಡಿಸಲಾಗಿದೆ.

ಉಳಿದಂತೆ ಜಿಲ್ಲೆಯ ಇತರೆಡೆಗಳಲ್ಲಿ ಅಂದು ಸಂಜೆ 6.25 ನೆರೆ ಕಟ್ಟುವುದು, 7.25 ಕದಿರು ತೆಗೆಯುವುದು ಮತ್ತು ರಾತ್ರಿ 8.25ಕ್ಕೆ ಭೋಜನಕ್ಕೆ ಸೂಕ್ತ ಸಮಯವೆಂದು ನಿಗದಿಪಡಿಸಲಾಗಿದೆ.

Must Read