November 9, 2026
Monday, November 9, 2026
spot_img

ಅತ್ತಿಬೆಲೆ ಬಳಿ ಹಿಟ್‌ & ರನ್‌ಗೆ ಇಬ್ಬರು ಸಾ*ವು: ಕಿಲೋಮೀಟರ್‌ಗಟ್ಟಲೆ ಬೆನ್ನುಹತ್ತಿ ಕಾರು ಚಾಲಕನನ್ನು ಹಿಡಿದ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆಯಲ್ಲಿ ಹಿಟ್‌ & ರನ್‌ನಲ್ಲಿ ಇಬ್ಬರು ಬೈಕ್‌ ಸವಾರರನ್ನು ಕಾರು ಬಲಿಪಡೆದಿದೆ. ಬೈಕ್‌ ಸವಾರರಿಗೆ ಗುದ್ದಿ ಸಂಬಂಧವೇ ಇಲ್ಲದಂತೆ ವೇಗವಾಗಿ ಕಾರು ಓಡಿಸಿಕೊಂಡು ಹೋದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಬೈಕ್‌ ಸವಾರರ ಪ್ರಾಣ ಬಲಿಪಡೆದ ಕಾರು ಚಾಲಕನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ತದನಂತರ ಆತನನ್ನು ಬಂಧಿಸಲಾಗಿದೆ. ದೇವನಹಳ್ಳಿ ಬಳಿಯ ಅತ್ತಿಬೆಲೆ ಸಮೀಪ ತಡರಾತ್ರಿ ಮಿಥುನ್‌ ಹಾಗೂ ಕನಕ ಎನ್ನುವವರು ಬೈಕ್‌ನಲ್ಲಿ ಬರುತ್ತಿದ್ದರು.

ಇಬ್ಬರೂ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಹಾಗೂ ಚಿಕನ್‌ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಡಾಬಾವೊಂದಕ್ಕೆ ಚಿಕನ್‌ ನೀಡಿದ ತದನಂತರ ಮನೆಗೆ ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ. ಹಿಂಬದಿಯಿಂದ ಯಮನಂತೆ ಬಂದ ಕಾರ್‌ ಚಾಲಕ ಇಬ್ಬರಿಗೆ ಡಿಕ್ಕಿ ಹೊಡೆದು ತಿರುಗಿ ನೋಡದೇ ಓಡಿಹೋಗಿದ್ದಾನೆ.

ಇಬ್ಬರೂ ರಸ್ತೆಯಲ್ಲಿಯೇ ಒದ್ದಾಡಿ ಪ್ರಾಣಬಿಟ್ಟಿದ್ದಾರೆ.ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್‌ ಪ್ಲೇಟ್‌ ಉದುರಿ ಹೋಗಿದೆ. ನಂತರ ಇದನ್ನೇ ಇಟ್ಟುಕೊಂಡು ಪೊಲೀಸರು ಈತನ ಬೆನ್ನುಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಮಾರ್ಗವಾಗಿ ತೆಲಂಗಾಣದತ್ತ ಕಾರು ತೆರಳುತ್ತಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಬೆನ್ನಟ್ಟಿದ್ದಾರೆ. ಆತ ಕಾರು ನಿಲ್ಲಿಸದೇ ಕುಡಿತದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ್ದಾನೆ. ನಂತರ ಇತರ ಗಾಡಿಗಳ ಸಹಾಯ ಪಡೆದು ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

Must Read