ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಮಾಡಲು ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚಂದ್ರನ ಕಕ್ಷೆ ಸೇರಿಕೊಂಡಿರುವ ವಿಕ್ರಮ್ ಲ್ಯಾಂಡರ್‌ನ್ನು ಇಸ್ರೋ 5.47ಕ್ಕೆ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ಆರಂಭಿಸಲಿದೆ.ಲ್ಯಾಂಡರ್ ವೇಗವನ್ನು ನಿಧಾನವಾಗಿ ತಗ್ಗಿಸುತ್ತಾ 6.04ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲಾಗುತ್ತದೆ. ಲ್ಯಾಂಡ್ ಇಳಿಕೆ ಪ್ರಕ್ರಿಯೆ 5.47ರಿಂದ ಆರಂಭಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ನೇರ ಪ್ರಸಾರ 5.20ರಿಂದ ಆರಂಭಗೊಳ್ಳಲಿದೆ.
ಮೊದಲು ವಿಕ್ರಮ್ ಲ್ಯಾಂಡರ್‌ನ ದಿಕ್ಕನ್ನು ಚಂದ್ರನ ಮೇಲ್ಮೈನತ್ತ ತಿರುಗಿಸುವ ಪ್ರಯತ್ನ ನಡೆಯಲಿದೆ. 5.40ಕ್ಕೆ ಚಂದ್ರನ ಮೇಲ್ಮೈನತ್ತ ವಿಕ್ರಮ್ ಲ್ಯಾಂಡರ್ ತಿರುಗಿಸಲಾಗುತ್ತದೆ. 5.47ಕ್ಕೆ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇತ್ತ 4.40ರಿಂದ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದಿಂದ ಚಂದ್ರಯಾನ 3 ಮಿಷನ್ ನೇರ ಪ್ರಸಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಂದ್ರಯಾನ-3 ಯೋಜನೆಯ ಸಾಫ್ಟ್ ಲ್ಯಾಂಡಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ಲಾಗಿ ಭಾಗಿಯಾಗಲಿದ್ದಾರೆ.
ಪ್ರಸ್ತುತ 15ನೇ ಬ್ರಿಕ್ಸ್ ಸಮ್ಮೇಳನಕ್ಕಾಗಿ ಪ್ರಧಾನಿ ಮೋದಿ 3 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಹಾಗಾಗಿ ಅಲ್ಲಿಂದಲೇ ಇಸ್ರೋದ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಸ್ರೋದೊಂದಿಗೆ ಸಂಪರ್ಕದಲ್ಲಿರಲಿದ್ದಾರೆ.
ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್ ಮಾಡಲು ಇಸ್ರೋ ಎಲ್ಲಾ ತಯಾರಿ ನಡೆಸಿದೆ. ಇದೀಗ ಐತಿಹಾಸಿಕ ಕ್ಷಣಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ.