ದೆಹಲಿ ಏಮ್ಸ್‌ನ ನಲ್ಲಿಗಳಲ್ಲಿ ಪೂರೈಕೆಯಾಗುವ ನೀರಿನಲ್ಲಿ ಸಿಕ್ಕಿವೆ ಲೆಕ್ಕವಿಲ್ಲದಷ್ಟು ಹುಳಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಏಮ್ಸ್‌ನ ನಲ್ಲಿಗಳಲ್ಲಿ ಹರಿಯುವ ನೀರಿನಲ್ಲಿ ಸಾವಿರಾರು ಜೀವಂತ ಹುಳುಗಳು ಕಾಣಿಸಿವೆ.

ಜೀವಂತ ಹುಳುಗಳು, ಲಾರ್ವಾಗಳು ಮತ್ತು ಕೀಟಗಳು ನೀರಿನಲ್ಲಿ ಕಾಣಿಸುತ್ತಿದೆ ಎಂದು ವೈದ್ಯರೇ ಆರೋಪಿಸಿದ್ದಾರೆ. ಈಗಾಗಲೇ ಆಹಾರದ ಗುಣಮಟ್ಟ ಸರಿಯಾಗಿಲ್ಲ, ನೈರ್ಮಲ್ಯ ಸಮಸ್ಯೆಯೂ ಇದೆ ಎಂದು ಏಮ್ಸ್ ತೀರ ಸುದ್ದಿಯಾಗಿತ್ತು.

ಇದೀಗ ಶುದ್ಧ ನೀರು ಇಲ್ಲದಿರುವುದರಿಂದ ಸಮಸ್ಯೆ ದುಪ್ಪಟ್ಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬಕೆಟ್‌ನಲ್ಲಿ ನೀರು ಹಿಡಿದರೆ ಬಕೆಟ್ ಕೊನೆಯಲ್ಲಿ ಹುಳಗಳನ್ನು ಕಾಣಬಹುದು. ಸ್ವಚ್ಛತೆಯಿಲ್ಲದೆ ಹೀಗೆ ಆಗಿದೆ. ವವೈದ್ಯರಿಗೆ ಆಹಾರ ತಯಾರಿಸುವ ಮೆಸ್‌ನಲ್ಲಿ ಅಡುಗೆಗೂ ಇದೇ ನೀರನ್ನು ಬಳಸುತ್ತಾರೆ ಎಂದು ವೈದ್ಯರು ದೂರಿದ್ದಾರೆ.

ಹಾಸ್ಟೆಲ್‌ಗಳಲ್ಲಿಯೂ ನೀರಿನ ಸಮಸ್ಯೆ ಇದೆ, ಇನ್ನು ನೀರಿನಿಂದ ದುರ್ವಾಸನೆ ಬರುವ ಬಗ್ಗೆಯೂ ಈಗಾಗಲೇ ಸಾಕಷ್ಟು ಬಾರಿ ದೂರಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನೀರಿನ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!