ದೇಶ ಅಪಾಯದಲ್ಲಿದೆ, ಪ್ಲೀಸ್ ಚಹಾ ಕುಡಿಯೋದು ಕಡಿಮೆ ಮಾಡಿ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರವನ್ನು ಉಳಿಸಲು ನಿತ್ಯ ಒಂದು ಅಥವಾ ಎರಡು ಕಪ್ ಚಹಾ ಸೇವನೆ ಕಡಿಮೆ ಮಾಡಿ…
ಹೀಗೆಂದು ಜನತೆಯಲ್ಲಿ ಮನವಿ ಮಾಡಿಕೊಂಡಿದೆ ಪಾಕ್ ಸರ್ಕಾರ.
ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದು, ಇದರಿಂದ ಚೇತರಿಸಿಕೊಳ್ಳಲು ಸರ್ಕಾರ ಇದೀಗ ಇಂತಹಾ ವಿಲಕ್ಷಣ ಹೆಜ್ಜೆಗಳನ್ನು ಇಡುತ್ತಿದೆ.
ದೇಶವು ಸಾಲ ಪಡೆದು ಚಹಾ ಆಮದು ಮಾಡಿಕೊಳ್ಳುತ್ತಿದ್ದು, ಈ ವೆಚ್ಚ ಕಡಿಮೆ ಮಾಡಲು ಪ್ರತಿದಿನ ಒಂದು ಅಥವಾ ಎರಡು ಕಪ್ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಿಶ್ವದ ಅತಿ ದೊಡ್ಡ ಚಹಾ ಆಮದುದಾರರಲ್ಲಿ ಪಾಕಿಸ್ತಾನವೂ ಒಂದು. ಚಹಾ ಆಮದು ಮಾಡಿಕೊಳ್ಳಲು ಸಾಲ ಮಾಡಬೇಕಾಗಿದೆ. ಚಹಾ ಸೇವನೆ ಪ್ರಮಾಣದಲ್ಲಿ  ಒಂದೆರಡು ಕಪ್‌ಗಳಷ್ಟು ಕಡಿಮೆಗೊಳಿಸುವಂತೆ ನಾನು ದೇಶದ ಜನತೆಗೆ ಮನವಿ ಮಾಡುತ್ತೇನೆ ಎಂದು ಇಕ್ಬಾಲ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!