ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಜೋಡಿಗಳು ತಮ್ಮ ವೈವಿಧ್ಯಮಯ ಪ್ರಿ-ವೆಡ್ಡಿಂಗ್ ಶೂಟ್‌ಗಳಿಂದ ವೈರಲ್ ಆಗುತ್ತಿವೆ. ಕೆಲವು ಟೀಕೆಗಳು ಮತ್ತು ಕೆಲವು ಸುಂದರವಾಗಿವೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಹಾವಿನೊಂದಿಗೆ ಇರುವ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದೆ. ಹಾವಿನಿಂದ ಶುರುವಾದ ಪ್ರೇಮಕಥೆ ಎಂದು ಈ ಜೋಡಿ ಕುತೂಹಲ ಮೂಡಿಸಿದೆ. ಇದಕ್ಕೆ ‘ನಾಗ್ ನೆ ಬನಾ ದಿ ಜೋಡಿ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮದುವೆಗಿಂತ ಪ್ರೀ ವೆಡ್ಡಿಂಗ್ ಶೂಟ್ ಗಳು ಹೆಚ್ಚು ಫೇಮಸ್ ಆಗಿವೆ. ಸೃಜನಾತ್ಮಕವಾಗಿ ಯೋಚಿಸಿ, ಭಾವಿ ದಂಪತಿಗಳು ವಿಭಿನ್ನ ರೀತಿಯಲ್ಲಿ ಫೋಟೋಗಳನ್ನು ಶೂಟ್ ಮಾಡುತ್ತಾರೆ. ಆದರೆ ಹಾವಿನೊಂದಿಗೆ ಈ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್ ವೈರಲ್ ಆಗುತ್ತಿದೆ.
ಯುವತಿ ತನ್ನ ಮನೆಯ ಹೊರಗೆ ಹಾವನ್ನು ಕಂಡು ತಕ್ಷಣ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಹಾವು ಹಿಡಿಯಲು ಬಂದ ವ್ಯಕ್ತಿಯ ಜೊತೆ ಈಕೆಗೆ ಪ್ರೇಮಾಂಕುರವಾಗಿದೆ ಎಂಬುದನ್ನು ಈ ಫೋಟೋ ಶೂಟ್‌ನಲ್ಲಿ ತಿಳಿಸಿಕೊಟ್ಟಿದ್ದಾರೆ. ಕೊನೆಯ ಫೋಟೋದಲ್ಲಿ ಹಾವು ಅವರತ್ತ ನೋಡುತ್ತಿರುವಂತೆ ಜೋಡಿ ಕೈಕೈ ಹಿಡಿದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಈ ಫೋಟೋಗಳು ವೈರಲ್ ಆಗುತ್ತಿವೆ.