‘ಬ್ಯಾಗ್‌ನಲ್ಲಿ ಬಾಂಬ್ ಇದೆ, ಈಗ್ಲೇ ಬ್ಲಾಸ್ಟ್ ಮಾಡ್ತೀನಿ’ ಏರ್‌ಪೋರ್ಟ್‌ನಲ್ಲಿ ಮಹಿಳೆ ಹೈಡ್ರಾಮಕ್ಕೆ ಇದೇ ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಹೈಡ್ರಾಮಕ್ಕೆ ಸಿಬ್ಬಂದಿ ಹೈರಾಣಾಗಿದ್ದಾರೆ. ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ, ಈಗ್ಲೇ ಬ್ಲಾಸ್ಟ್ ಮಾಡಿಬಿಡ್ತೀನಿ ಎಂದು ಮಹಿಳೆ ಸೀನ್ ಕ್ರಿಯೇಟ್ ಮಾಡಿದ್ದು, ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇಷ್ಟೆಲ್ಲಾ ಡ್ರಾಮಕ್ಕೆ ಕಾರಣ ದುಡ್ಡು! ಹೌದು, ಲಗೇಜ್‌ಗೆ ಎಕ್ಸ್ಟ್ರಾ ಹಣ ನೀಡಿ ಎಂದು ಸಿಬ್ಬಂದಿ ಹೇಳಿದ್ದಕ್ಕೆ ಕೋಪಗೊಂಡ ಮಹಿಳೆ ಈ ರೀತಿ ನಾಟಕ ಮಾಡಿದ್ದಾಳೆ. ತಕ್ಷಣವೇ ಆಕೆಯ ಬ್ಯಾಗ್‌ನ್ನು ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ.

ಏರ್‌ಪೋರ್ಟ್‌ನಲ್ಲಿ ಮಹಿಳೆ ಕೂಗಿದ್ದಕ್ಕಾಗಿ ಸಾಕಷ್ಟು ಪ್ರಯಾಣಿಕರು ಹೆದರಿದ್ದು, ಕೆಲ ಕಾಲ ಏರ್‌ಪೋರ್ಟ್‌ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!