ಕೊರಿಯರ್ ಸ್ಕ್ಯಾಮ್ : ಒಂದು ಕೋಟಿ ರೂಪಾಯಿ ಸುಲಿಗೆ ಮಾಡಿದ ಎಂಟು ಮಂದಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಷ್ಠಿತ ಫೆಡೆಕ್ಸ್ ಕೊರಿಯರ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಸೈಬರ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಪಾರ್ಸಲ್ ಬಂದಿದೆ ಎಂದು ಹೇಳಿದ್ದು, ಮುಂಬೈ ಪೊಲೀಸರ ಹೆಸರಿನಲ್ಲಿ ನಾಟಕ ಮಾಡಿದ್ದ ಸೈಬರ್ ವಂಚಕರ ಜಾಲವನ್ನು ಮಲ್ಲೇಶ್ವರಂ ಪೊಲೀಸರು ಬೇಧಿಸಿದ್ದಾರೆ.

ವಾಸಿಂ, ಹಬೀಬುಲ್ಲಾ, ನಿಜಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲಾ ಖಾನ್, ಮೊಹಮ್ಮದ್ ಉಮರ್, ಸೈಯದ್ ಅಹ್ಮದ್ ಅಲಿಯಾಸ್ ಮೌಲಾ ಮತ್ತು ಸೈಯದ್ ಹುಸೇದ್ ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 13.17 ಲಕ್ಷ ನಗದು, 11 ಫೋನ್, ಚೆಕ್‌ಬುಕ್ ಹಾಗೂ ಪಾಸ್‌ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮಲ್ಲೇಶ್ವರದ ನಿವೃತ್ತ ಅಧಿಕಾರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದಾರೆ. ಫೆಡೆಕ್ಸ್ ಹೆಸರಿನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ಮಾದಕ ವಸ್ತುಗಳು ಬೇರೆ ದೇಶಕ್ಕೆ ರವಾನೆಯಾಗುತ್ತಿವೆ. ಅದರಲ್ಲಿ ಏನೆಲ್ಲಾ ಇದೆ ಎಂದು ಹೆದರಿಸಿದ್ದಾರೆ.

ನಿಮ್ಮ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲನೆ ಮಾಡಬೇಕು. ತನಿಖೆಗಾಗಿ ಮುಂಗಡ ಹಣ ನೀಡಿ ಎಂದು ಕೇಳಿದ್ದಾರೆ.

ಸಂತ್ರಸ್ತರು ಹಣ ನೀಡಿದ್ದಾರೆ. ವಿವಿಧ ಹಂತಗಳಲ್ಲಿ 1.8 ಕೋಟಿ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ನಂತರ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಸಂತ್ರಸ್ತರು ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!