PASTA | ಹೊಟೇಲ್ ಟೇಸ್ಟಿಯ ಪಾಸ್ತಾ ಬಟರ್ ಮಸಾಲಾ ಮನೆಯಲ್ಲೇ ಮಾಡಿನೋಡಿ!

ಬೇಕಾಗುವ ಪದಾರ್ಥಗಳು: ಪಾಸ್ತಾ 1ಬಟ್ಟಲು, ಬೆಣ್ಣೆ ಸ್ವಲ್ಪ, ಶುಂಠಿ ಬೆಳ್ಳುಳ್ಳಿ 1 ಚಮಚ, ಟೊಮೆಟೋ 1, ಈರುಳ್ಳಿ 2 ಖಾರದ ಪುಡಿ 1 ಚಮಚ, ಗರಂ ಮಸಾಲಾಪುಡಿ 1 ಚಮಚ
ಜೀರಿಗೆ ಪುಡಿ ಸ್ವಲ್ಪ, ಕಸೂರಿ ಮೇಥಿ ಸ್ವಲ್ಪ, ಹಾಲು- 2 ಬಟ್ಟಲು, ಎಣ್ಣೆ 2 ಚಮಚ,ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾಣಲೆಯನ್ನು ತೆಗೆದುಕೊಳ್ಳಿ. ಉಪ್ಪು, ಎಣ್ಣೆ, ಪಾಸ್ತಾ ಮತ್ತು ನೀರನ್ನು ಹಾಕಿ ಸರಿಯಾಗಿ ಬೇಯಿಸಿ. ಪಾಸ್ತಾ ಬೆಂದ ನಂತರ ಅದರಲ್ಲಿರುವ ನೀರನ್ನು ಬಸಿದು ಪ್ರತ್ಯೇಕವಾಗಿ ಇಡಿ. ಮತ್ತೊಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಮಾಡಿ. ನೀರುಳ್ಳಿ, ಟೊಮೆಟೋ, ಶುಂಠಿ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈಮಾಡಿ. ಚೆನ್ನಾಗಿ ಫ್ರೈಮಾಡಿದ ನಂತರ ಆರಲು ಬಿಡಿ. ಇದನ್ನು ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಒಲೆಯಲ್ಲಿರುವ ಬಾಣಲೆಗೆ ಬೆಣ್ಣೆ ಹಾಕಿ. ರುಬ್ಬಿದ ಮಿಶ್ರಣ ಹಾಕಿ ಬೇಯಿಸಿ. ಸ್ವಲ್ಪ ಉಪ್ಪು ಸೇರಿಸಿಕೊಳ್ಳಿ. ಖಾರದ ಪುಡಿ ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈಮಾಡಿ.
ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಪಾಸ್ತಾ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಸ್ತಾ ಬಟರ್ ಮಾಸಾಲ ರೆಡಿ!

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!