ಸ್ಮೃತಿ ಇರಾನಿ ಮತ್ತು ಪುತ್ರಿಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ತೆಗೆದುಹಾಕುವಂತೆ ಕಾಂಗ್ರೆಸ್ಸಿಗರಿಗೆ ಕೋರ್ಟ್‌ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗೋವಾದಲ್ಲಿ ಅಕ್ರಮ ಬಾರ್‌ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವಹೇಳನಕಾರಿ ವಿಷಯಗಳನ್ನು ತೆಗೆದುಹಾಕುವಂತೆ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ ಗಳ ಕುರಿತು ಸ್ಮೃತಿ ಇರಾನಿ ಕೋರ್ಟ್‌ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಸಮನ್ಸ್‌ ನೀಡಿದೆ. “ನೈಜ ಸಂಗತಿಗಳನ್ನು ಪರಿಶೀಲಿಸದೆ ಆರೋಪಗಳನ್ನು ಮಾಡಲಾಗಿದೆ ಮತ್ತು ಇರಾನಿ ಅವರಿಗೆ ಘಾಸಿ ಮಾಡಲಾಗಿದೆ ಎಂಬ ಪ್ರಾಥಮಿಕ ಅಭಿಪ್ರಾಯವನ್ನು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಹೇಳಿದ್ದಾರೆ.

‘‘ಆಪಾದಿದಾರರ ವಿರುದ್ಧ ವಾಸ್ತವಿಕ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ದೂಷಣೆಯ ಆರೋಪಗಳನ್ನು ಮಾಡಲಾಗಿದೆ ಎಂದು ನಾನು ಮೇಲ್ನೋಟಕ್ಕೆ ಭಾವಿಸುತ್ತೇನೆ. ಪ್ರತಿವಾದಿಗಳ ಪತ್ರಿಕಾಗೋಷ್ಠಿಯಿಂದಾಗಿ ಮಾಡಿದ ಟ್ವೀಟ್‌ಗಳು ಮತ್ತು ರೀಟ್ವೀಟ್‌ಗಳಿಂದಾಗಿ ಫಿರ್ಯಾದಿದಾರರ (ಸ್ಮೃತಿ ಇರಾನಿ) ಪ್ರತಿಷ್ಠೆಗೆ ಗಂಭೀರ ಗಾಯವಾಗಿದೆ. ಫಿರ್ಯಾದಿಯು ಮೊದಲ ನೋಟದ ಪ್ರಕರಣವನ್ನು ಮಾಡಿದ್ದಾನೆ ಮತ್ತು ಅನುಕೂಲತೆಯ ಸಮತೋಲನವು ಫಿರ್ಯಾದಿಯ ಪರವಾಗಿ ಮತ್ತು ಪ್ರತಿವಾದಿಗಳ ವಿರುದ್ಧ ಇರುತ್ತದೆ, ”ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ

ಆದ್ದರಿಂದ, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಗಳನ್ನು ಅಳಿಸಲು ಮತ್ತು ತೆಗೆದುಹಾಕಲು ಪ್ರತಿವಾದಿಗಳಿಗೆ ನಿರ್ದೇಶಿಸುವ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!