Tuesday, August 16, 2022

Latest Posts

ಡಬಲ್‌ ಹಣ ಕೊಟ್ಟು ಚೈತೂ ಜೊತೆಗೆ ಕಾಲ ಕಳೆದ ನಿವಾಸ ಖರೀದಿಸಿದ ಸ್ಯಾಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಡಿವೋರ್ಸ್‌ ಆದ ಬಳಿಕ ನಾಗಚೈತನ್ಯ ಹಾಗೂ ಸಮಂತಾ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಛೇದನ ಪಡೆದ ಬಳಿಕ ಇತೀಚೆಗಷ್ಟೇ ಸಮಂತಾ ಚೈತೂ ಬಗ್ಗೆ ಕಾಮೆಂಟ್‌ ಮಾಡುತ್ತಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಸಮಂತಾ ಚೈತು ಬಗ್ಗೆ ಮಾತನಾಡಿ ಸುದ್ದಿಯಾದ ಬೆನ್ನಲ್ಲೇ, ಮದುವೆಯ ನಂತರ ಸಮಂತಾ ಚೈತು ವಾಸಿಸುತ್ತಿದ್ದ ಮನೆಯನ್ನು ಖರೀದಿಸಿದ್ದಾರೆ.  ಸಮಂತಾ ಈ ಮನೆಯನ್ನು ಹೆಚ್ಚು ಹಣ ಕೊಟ್ಟು ಖರೀದಿಸಿರುವುದಾಗಿ ಹಿರಿಯ ನಟ ಮುರಳಿ ಮೋಹನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮದುವೆಯ ನಂತರ ನಮ್ಮ ಮನೆ ಖರೀದಿಸಿ ಒಟ್ಟಿಗೆ ಇದ್ದರು ನಂತರ ಇಬ್ಬರೂ ಬೇರೆ ಮನೆಗೆ ಶಿಫ್ಟ್‌ ಆಗಿ ಆ ಮನೆಯನ್ನು ಖರೀದಿಸಿ  ಬೇರೆಯವರಿಗೆ ಮಾರಿದರು. ಇದೀಗ ಸಮಂತಾ ಮತ್ತೆ ಆ ಮನೆ ತಮಗೆ ಬೇಕೆಂದು ಕೇಳಿದ್ದಾರೆ. ಈಗಾಗಲೇ ಬೇರೆಯವರಿಗೆ ನೀವು ಮಾರಾಟ ಮಾಡಿದ್ದೀರಿ. ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಮುರುಳಿ ಮೋಹನ್‌ ತಿಳಿಸಿದ್ರಂತೆ. ಕೂಡಲೇ ಮನೆ ಕೊಂಡವರಿಗೆ ಡಬಲ್‌ ಹಣ ಕೊಟ್ಟು ಮತ್ತೆ ಆ ಮನೆಯನ್ನು ವಾಪಸ್‌ ಪಡೆದು ತನ್ನ ತಾಯಿಯೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ.

ಸಮಂತಾ ಚೈತನ್ಯ ಜೊತೆ ಇದ್ದ ಮನೆಯನ್ನು ಖರೀದಿಸಿದ ಸುದ್ದಿ ತಿಳಿದ ಅಭಿಮಾನಿಗಳು ಹಾಗೂ ನೆಟ್ಟಿಗರು, ಬೇಕಾದಷ್ಟು ಮನೆಗಳಿದ್ದರೂ ಹೆಚ್ಚು ಹಣ ಕೊಟ್ಟು ಖರೀದಿಸಿದ್ದರ ಹಿಂದಿನ ಉದ್ದೇಶವೇನು? ಚೈತು ಜೊತೆಗಿನ ನೆನಪುಗಳಿಗಾಗಿ ಮನೆ ಖರೀದಿಸಿದ್ದಾರೆ ಎಂದು ಬಗೆ ಬಗೆಯ ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss