ಭಾರತದಲ್ಲಿ ಕೋವಿಡ್ ಇಳಿಕೆ: ಆರೋಗ್ಯ ತುರ್ತಸ್ಥಿತಿ ಅಂತ್ಯ, ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಬಹುತೇಕ ಇಳಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ 1,223 ಕೇಸ್​ಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16,498ಕ್ಕೆ (ಶೇ.0.04) ಇಳಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಕಳೆದ 24 ಗಂಟೆಗಳಲ್ಲಿ 2,720 ಸೋಂಕಿತರು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4.44 ಕೋಟಿಗೂ ಅಧಿಕವಾಗಿದೆ. ಇದರೊಂದಿಗೆ ಚೇತರಿಕೆ ಪ್ರಮಾಣ ಶೇ.98.78ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನ ಇತ್ತೀಚಿನ ದತ್ತಾಂಶದ ಪ್ರಕಾರ ಮೂರನೇ ಅಲೆಯಲ್ಲಿ ಸಮಸ್ಯೆ ಎದುರಿಸುತ್ತಿತ್ತು. ಆದರೆ ಲಸಿಕೆ ಹಾಗೂ ಮೂರನೇ ಅಲೆಯಲ್ಲಿ ವೈರಾಣು ತೀವ್ರತೆ ತಗ್ಗಿದ ಪರಿಣಾಮ ಹಾಗೂ ಸಾಮಾನ್ಯ ಶೀತದಂತೆ ದೇಹದ ಮೇಲೆ ಪರಿಣಾಮ ಬೀರಿದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೋಂಕು ಹಾಗೂ ಸಾವು ಸಂಭವಿಸಿವೆ.

ಹವಾಮಾನ ಆಧಾರಿತ ವಲಯಗಳಲ್ಲಿ ಕೋವಿಡ್ ಪ್ರಕರಣಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಿದ ಸಂಶೋಧಕರು, ಆಯಾ ಪ್ರದೇಶಗಳಿಗೆ ಪೂರಕವಾಗಿ ವರದಿಯಾಗುವ ರೂಪಾಂತರಿಗಳ ಗುಂಪುಗಳು ಹಾಗೂ ಅವುಗಳ ನಡುವಿನ ಗಮನಾರ್ಹ ವ್ಯತ್ಯಾಸಗಳನ್ನು ಗುರುತಿಸಿದ್ದರು. ಇದರಿಂದ 18 ಸಾವಿರಕ್ಕೂ ಹೆಚ್ಚು ರೂಪಾಂತರಿಗಳು ಪತ್ತೆಯಾಗಿದ್ದವು. ಇದರಲ್ಲಿ ಕೋವಿಡ್ ಆರಂಭದ ಮೂರು ಅಲೆಗಳಲ್ಲಿ ಕಾಣಿಸಿಕೊಂಡಿದ್ದ ಪ್ರಮುಖ ರೂಪಾಂತರಿಗಳಾದ ಆಲ್ಪಾ, ಡೆಲ್ಟಾ ಮತ್ತು ಒಮಿಕ್ರಾನ್​ಗಳು ಕಾಣಿಸಿಕೊಂಡಿದ್ದವು. ಇದರ ಹೊರತಾಗಿ ಸಾಂಕ್ರಾಮಿಕ ರೋಗದ ಪ್ರಾರಂಭ ಮತ್ತು ಜುಲೈ 2022ರ ಅಂತ್ಯದ ನಡುವಿನ ಅವಧಿಯಲ್ಲಿ ವರದಿಯಾಗಿದ್ದ 1.20 ಕೋಟಿ ಅಧಿಕ ಜೀನೋಮ್ಳ ವಿಶ್ಲೇಷಣೆ ಮಾಡಲಾಗಿದೆ. ಈ ವೇಳೆ ಸರಾಸರಿ ಕಡಿಮೆ ತಾಪಮಾನ ಹೊಂದಿರುವ ದೇಶಗಳಲ್ಲಿ ಸೋಂಕು ಪ್ರಕರಣಗಳು ಮತ್ತು ಮರಣ ದರ ಪರಸ್ಪರ ಸಂಬಂಧ ಹೊಂದಿರುವುದು ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಜಾಗತಿಕವಾಗಿ ಕೋವಿಡ್ ಸಾಂಕ್ರಾಮಿಕ ಆರೋಗ್ಯ ತುರ್ತಸ್ಥಿತಿ ಕೊನೆಗೊಂಡಿದೆ ಎಂದು ಘೋಷಿಸಿದೆ. ಆದಾಗ್ಯೂ ಯಾವುದೇ ಹೊಸ ರೂಪಾಂತರದ ವೈರಾಣು ಪ್ರಮಾಣ ಮತ್ತು ಹರಡುವಿಕೆ ಕುರಿತು ಮೇಲ್ವಿಚಾರಣೆ ಮಾಡಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!