Friday, June 9, 2023

Latest Posts

HEALTH | ಕೋವಿಡ್ ಎಫೆಕ್ಟ್, ಹೆಚ್ಚಾಗಿದೆ ಪುರುಷರಲ್ಲಿ ಲೈಂಗಿಕ ದೌರ್ಬಲ್ಯ ಸಮಸ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಏಕಾಏಕಿ ಸಾಕಷ್ಟು ಮಾನಸಿಕ ಒತ್ತಡಕ್ಕೆ ಪುರುಷರು ಒಳಗಾಗಿದ್ದು, ಒತ್ತಡದಿಂದ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ.

ಪುರುಷರಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯ ಕುಗ್ಗುವಿಕೆ, ಅಪಸಾಮಾನ್ಯ ಕ್ರಿಯೆ ಹಾಗೂ ದುರ್ಬಲತೆ ಸಮಸ್ಯೆಗಳು ಹೆಚ್ಚಾಗಿವೆ. ಇದಕ್ಕಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಳ್ಳುವುದು, ಮನೆಯಲ್ಲೇ ಇದ್ದದ್ದು, ಮಾನಸಿಕ ಸಮಸ್ಯೆಗಳು, ಆರ್ಥಿಕ ಒತ್ತಡಗಳಿಂದ ೧೮-೪೫ ವಯೋಮಾನದವರಲ್ಲಿ ದುರ್ಬಲತೆ ಪ್ರಕರಣಗಳು ಹೆಚ್ಚಾಗಿದೆ. ಭಾವನಾತ್ಮಕ ಸಮಸ್ಯೆಗಳು, ಹಣಕಾಸಿನ ಕೊರತೆ ಕೋವಿಡ್ ಚಿಕಿತ್ಸೆಗಾಗಿ ಸ್ಟೀರಾಯ್ಡ್ ಸೇವನೆ, ಧೂಮಪಾನ ಹಾಗೂ ಮದ್ಯಪಾನವೂ ಇದಕ್ಕೆ ಕಾರಣವಾಗಿದೆ.

ನಿಮಿರುವಿಕೆ ಸಮಸ್ಯೆಗೆ ( ಎರೆಕ್ಟೈಲ್ ಡಿಸ್‌ಫಂಕ್ಷನ್) ಮುಖ್ಯ ಕಾರಣವೇನೆಂದರೆ ಎಂಡೋಥೀಲಿಯಲ್ ಅಪಸಾಮಾನ್ಯ ಕ್ರಿಯೆ ಅಂದರೆ ರಕ್ತನಾಳಗಳು ಕಿರಿದಾಗುವುದು. ಕೋವಿಡ್ ಸಮಯಲ್ಲಿ ಅನುಭವಿಸಿದ ಮಾನಸಿಕ ಸಮಸ್ಯೆಗಳಿಗೂ ಇದಕ್ಕೂ ಸಂಬಂಧವಿದೆ ಎಂದು ವೈದ್ಯರು ಹೇಳುತ್ತಾರೆ.

ನಿಮಿರುವಿಕೆಗೆ ರಕ್ತದ ಉತ್ತಮ ಹರಿವು ಅತ್ಯಾವಶ್ಯ ಆದರೆ ವ್ಯಕ್ತಿ ಒತ್ತಡದಲ್ಲಿದ್ದಾಗ ರಕ್ತನಾಳಗಳು ಕಿರಿದಾಗುತ್ತವೆ. ಇದು ಇಡಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಅವಶ್ಯವಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!