ಕ್ಷಯ ತಪಾಸಣೆಗೂ ಕೋವಿಡ್ ಅಡ್ಡಿ: ಶಾಕಿಂಗ್ ಸಂಗತಿ ಬಿಚ್ಚಿಟ್ಟದೆ ಈ ಅಧ್ಯಯನ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ ಕ್ಷಯ ರೋಗ ಪ್ರಕರಣ ಪತ್ತೆಹಚ್ಚುವ ಪ್ರಕ್ರಿಯೆಗೆ ಕೋವಿಡ್ ತೀವ್ರ ರೀತಿಯಲ್ಲಿ ಅಡ್ಡಿಯಾಗಿದೆ ಎಂಬ ವಿಚಾರವನ್ನು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನ ಅಧ್ಯಯನಕಾರರು ಸಿದ್ಧಪಡಿಸಿರುವ ಈ ಅಧ್ಯಯನ ವರದಿಯು ಬಿಎಂಸಿ ಮೆಡಿಸಿನ್ ಎಂಬ ನಿಯತ ಕಾಲಿಕದಲ್ಲಿ ಪ್ರಕಟವಾಗಿದೆ.

ಜೀವಕ್ಕೇ ಕುತ್ತು ತರುವ ಸೋಂಕುಗಳ ಪೈಕಿ ಕ್ಷಯ ರೋಗಕ್ಕೆ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನವಿದೆ. ಸೋಂಕು ಪತ್ತೆ ಹಚ್ಚುವುದೇ ಇದನ್ನು ತಡೆಯಲು ಇರುವ ಏಕೈಕ ಮಾರ್ಗವಾಗಿದೆ. ಆದರೆ 2020ರಲ್ಲಿ ಭಾರತವೂ ಸೇರಿದಂತೆ ಅತಿ ಹೆಚ್ಚು ಕ್ಷಯ ರೋಗಿಗಳಿರುವ 45 ದೇಶಗಳಲ್ಲಿನ ಸುಮಾರು 15 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕ್ಷಯರೋಗ ಪತ್ತೆಹಚ್ಚುವುದು ವಿಳಂಬವಾಗಿದ್ದು, ಇದಕ್ಕೆ ಕೋವಿಡ್ ಮಹಾಮಾರಿಯೇ ಕಾರಣ ಎಂದು ವರದಿ ಹೇಳಿದೆ.

ಭಾರತದಲ್ಲಿ 15 ವರ್ಷದೊಳಗಿನ 50,454 ಮಕ್ಕಳು, 15 ರಿಂದ 64 ವರ್ಷದೊಳಗಿನ 4.2 ಲಕ್ಷಕ್ಕೂ ಹೆಚ್ಚಿನ ನಾಗರಿಕರು ಮತ್ತು 65 ವರ್ಷ ಮೇಲ್ಪಟ್ಟ 52,970 ಹಿರಿಯ ನಾಗರಿಕರಲ್ಲಿ ಕ್ಷಯರೋಗ ಪತ್ತೆ ಹಚ್ಚುವುದು, ಪತ್ತೆಯಾಗದೇ ಇರುವುದಕ್ಕೆ ಕೋವಿಡ್ ಪ್ರಮುಖ ಕಾರಣ ಎಂದು ವರದಿ ಹೇಳಿದೆ.

ಕೋವಿಡ್ ಕಾರಣದಿಂದಾಗಿ ಕ್ಷಯರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರೆತಿಲ್ಲ. ಇದರ ಪರಿಣಾಮ ಕ್ಷಯ ರೋಗ ಇನ್ನಷ್ಟು ವ್ಯಾಪಿಸಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ ಮೊದಲೇ ಕ್ಷಯರೋಗದಿಂದ ತತ್ತರಿಸಿದ್ದ ಈ 45 ದೇಶಗಳಲ್ಲಿ ಕೋವಿಡ್‌ನಿಂದ ಮತ್ತೂ ಹೆಚ್ಚಿನ ತೊಂದರೆಯಾಗಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!