ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೇ ಒಂದು ಎಸೆತವೂ ನಡೆಯದೆ ರದ್ದಾಗಿತ್ತು. ಕೊನೆಯ ಪಂದ್ಯ ಮಂಗಳವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಅದೇ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ 7:30 PM ಗೆ ಆರಂಭವಾಗುತ್ತದೆ.
ಪಂದ್ಯಕ್ಕೆ ಮಳೆ ಕಾಟ?
ನ್ಯೂಜಿಲೆಂಡ್ ಹವಾಮಾನ ಇಲಾಖೆ ಪ್ರಕಾರ, 2ನೇ ಟಿ 20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಶೇ. 50 ಕ್ಕಿಂತ ಹೆಚ್ಚಿದೆ. ಪಂದ್ಯ ನಡೆಯುವ ಸ್ಥಳದಲ್ಲಿ ಹವಾಮಾನವು ಪಂದ್ಯದ ಉದ್ದಕ್ಕೂಆರ್ದ್ರವಾಗಿರುತ್ತದೆ. ಆಟದ ಆರಂಭದಲ್ಲಿ ಶೇ. 36 ರಷ್ಟು ಮಳೆಯ ಪ್ರಮಾಣ ಇರಲಿದೆ. ಪಂದ್ಯದ ಮಧ್ಯೆ ಶೇ. 64 ರಷ್ಟು ಮತ್ತು ಪಂದ್ಯ ಮುಗಿಯುವ ಸಮಯದಲ್ಲಿ ಶೇ. 34 ರಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಈ ಪಂದ್ಯ ಕೂಡ ನಡೆಯುವುದು ಅನುಮಾನ ಎಂಬಂತಾಗಿದೆ. ಮಳೆ ಸಾಧ್ಯತೆಯಿರುವುದರಿಂದ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಟಾಸ್ ಗೆದ್ದ ತಂಡವು ಹವಾಮಾನವನ್ನು ಪರಿಗಣಿಸಿ ಬೌಲಿಂಗ್ ಆಯ್ಕೆ ಮಾಡಲು ಬಯಸುತ್ತದೆ.
ಟೀಮ್ ಇಂಡಿಯಾ:
ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಯಾದವ್, ಕುಲ್ಹಲ್ ಯಾದವ್
ನ್ಯೂಜಿಲೆಂಡ್ ತಂಡ:
ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕಲ್ ಬ್ರೇಸ್‌ವೆಲ್, ಇಶ್ ಸೋಧಿ