ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಅಟ್ಟಹಾಸದಿಂದ ತತ್ತರಿಸಿದ್ದ ಕೆನಡಾಗೆ ಇದೀಗ ಮತ್ತೊಂದು ಸೋಂಕಿನ ಭೀತಿ ಎದುರಾಗಿದೆ.
ಉಸಿರಾಟದ ತೊಂದರೆ ಹಾಗೂ ಫ್ಲೂ ರೀತಿಯ ಸಿನ್ಸಿಟಿಯಲ್ ವೈರಸ್ನ ಟ್ರೈಡೆಮಿಕ್ನ ಭೀತಿ ಹೆಚ್ಚಾಗಿದೆ.
ಕೆನಡಾದಲ್ಲಿ ಭಾರೀ ಸಂಖ್ಯೆಯ ರೋಗಿಗಳು ಉಸಿರಾಟದ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಫ್ಲೂ, ಕೋವಿಡ್ ಹಾಗೂ ಆರ್ಎಸ್ವಿ ಈ ಮೂರು ವೈರಸ್ಗಳ ಸಂಯೋಜನೆಯಾಗಿರುವ ಟ್ರೈಡೆಮಿಕ್ ಪ್ರಕರಣಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ವಿಶ್ವದಾದ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.