ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇದೀಗ ವರದಿಯಾಗುತ್ತಿರುವ ಕೋವಿಡ್ ಹೊಸ ರೂಪಾಂತರ ಜೆಎನ್ 1 ಗೆ ಅದಾಗಲೇ ಇರುವ ಲಸಿಕೆ ಉಪಯೋಗಕ್ಕೆ ಬರುತ್ತದೆಯೇ? ಈ ಬಗ್ಗೆ ಏಮ್ಸ್ ಮಾಜಿ ನಿರ್ದೇಶಕ ರಣದೀಪ ಗುಲೇರಿಯ ವಿಶ್ಲೇಷಿಸಿದ್ದಾರೆ.
ಅವರ ಪ್ರಕಾರ ಈಗಿನ ಅಲೆಯು ರೋಗವನ್ನು ಹರಡುತ್ತಿರುವ ತೀವ್ರತೆ ಹೆಚ್ಚಿದ್ದರೂ ಆಸ್ಪತ್ರೆ ಸೇರುವ ಪ್ರಮಾಣ ಕಡಿಮೆ. ಇದು ಒಮಿಕ್ರಾನ್ ರೂಪಾಂತರದ್ದೆ ಉಪ ರೂಪಾಂತರವಾಗಿರುವುದರಿಂದ, ಒಮಿಕ್ರಾನ್ ಅನ್ನು ಉದ್ದೇಶಿಸಿ ತಯಾರಿಸಿದ ಲಸಿಕೆ ಪರಿಣಾಮಕಾರಿಯಾಗಿರುತ್ತದೆ. ಆದಾಗ್ಯೂ ಕೋವಿಡ್ ಹೆಚ್ಚು ರೂಪಾಂತರಗಳಿಗೆ ಒಳಗಾಗುತ್ತ ಹೋದಂತೆ ಎಲ್ಲವನ್ನೂ ಒಳಗೊಳ್ಳುವ ಹೊಸ ಲಸಿಕೆಯೇ ಬೇಕಾಗುತ್ತದೆ.
ಆದರೆ ಇವೆಲ್ಲಕ್ಕೆ ಮೊದಲು ಈ ಹಿಂದಿನ ಲಸಿಕೆಗಳಿಂದ ಜನಸಂಖ್ಯೆ ಎಷ್ಟು ಭಾಗ ರೋಗ ನಿರೋಧಕತೆ ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ನಿಖರ ಅಂಕಿಅಂಶ ಬೇಕಾಗುತ್ತದೆ. ಅದರ ಆಧಾರದಲ್ಲಷ್ಟೇ ಹೊಸ ಲಸಿಕೆ ಬಗ್ಗೆ ಯೋಚಿಸಬಹುದು ಎಂದು ಗುಲೇರಿಯಾ ಹೇಳಿದ್ದಾರೆ.