ಮೊದಲ ಸುತ್ತಿನಲ್ಲಿ ಕೋವಿಡ್ ಲಸಿಕೆ ಉಳಿಸಿದ್ದು ಬರೋಬ್ಬರಿ 2 ಕೋಟಿ ಜೀವ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಲಸಿಕೆ ತನ್ನ ಮೊದಲ ವರ್ಷದಲ್ಲಿಯೇ ಬರೋಬ್ಬರಿ 2 ಕೋಟಿ ಜೀವ ಉಳಿಸಿದೆ!
ಸಾಂಕ್ರಾಮಿಕ ರೋಗಗಳ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಶುಕ್ರವಾರ ಪ್ರಕಟಿಸಿರುವ ಅಧ್ಯಯನ ವರದಿ ಈ ಅಂಕಿ ಅಂಶಗಳನ್ನು ಹೇಳಿವೆ.
ಜಾಗತಿಕವಾಗಿ ಕೋವಿಡ್ ಸೋಂಕಿಗೆ ತುತ್ತಾಗಿ 3.4 ಕೋಟಿ ಜನರು ಸಾವಿಗೀಡಾಗುವ ಸಾಧ್ಯತೆಯಿತ್ತು. ಆದರೆ, ಲಸಿಕೆ ಪಡೆದ ಬಳಿಕ ಸಾವಿನ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದ್ದು, ಶೇ. 63ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
2021ರ ಅಂತ್ಯದ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನ ಜನಸಂಖ್ಯೆಯ 40 ಪ್ರತಿಶತ ಕೋವಿಡ್ ಲಸಿಕೆ ನೀಡುವ ಗುರಿ ಪೂರೈಸಿದ್ದರೆ ಇನ್ನೂ 5,99,300 ಜೀವಗಳನ್ನು ಉಳಿಸಬಹುದಿತ್ತು ಎಂದು ಇದೇ ಅಧ್ಯಯನ ಹೇಳಿದೆ.
ಯುಕೆಯ ಇಂಪೀರಿಯಲ್ ಕಾಲೇಜ್ ಲಂಡನ್‌ನ ಸಂಶೋಧಕರು ಗಣಿತದ ಮಾದರಿ ಬಳಸಿ ಈ ಅಧ್ಯಯನ ನಡೆಸಿದ್ದಾರೆ. ಜಗತ್ತಿನ ೧೮೫ ರಾಷ್ಟ್ರಗಳ 2020 ಡಿ.8ರಿಂದ 2021 ಡಿ.8ರ ಅವಧಿಯ ವರದಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!