ಬುಲ್ಡೋಜರ್‌ನಲ್ಲಿ ಮೆರವಣಿಗೆ ಬಂದ ಮದುಮಗನಿಗೆ ಪೊಲೀಸರು ಕೊಟ್ರು ‘ಗಿಫ್ಟ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುದುರೆ, ಕಾರು ಬಿಟ್ಟು ಬುಲ್ಡೋಜರ್‌ನಲ್ಲಿ ಮದುವೆ ಮೆರವಣಿಗೆ ಮಾಡಿ ದಂಡ ಕಟ್ಟಿಸಿಕೊಂಡ ಘಟನೆಯೊಂದು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.
ಸಿವಿಲ್ ಇಂಜಿನಿಯರ್ ಅಂಕುಶ್ ಜೈಸ್ವಾಲ್ ಎಂಬವರ ವಿವಾಹ ಜಲ್ಲಾರ್ ಗ್ರಾಮದಲ್ಲಿ ಬುಧವಾರ ನಡೆದಿದ್ದು, ತಮ್ಮ ಮದುವೆ ಮೆರವಣಿಗೆಯನ್ನು ಬುಲ್ಡೋಜರ್‌ನಲ್ಲಿ ನಡೆಸಿದ್ದರು. ದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಮನಿಸಿದ ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್, ಬುಲ್ಡೋಜರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದು, ಸಂಚಾರ ಠಾಣೆ ಪೊಲೀಸರು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ 5,000 ದಂಡ ವಿಧಿಸಿದ್ದಾರೆ.
ನಿಯಮಾವಳಿಯಂತೆ ಬುಲ್ಡೋಜರ್ ವಾಣಿಜ್ಯ ಬಳಕೆ ವಾಹನವಾಗಿದ್ದು, ಜನರನ್ನು ಸಾಗಿಸಲು ಅನುಮತಿ ಇಲ್ಲ. ಚಾಲಕ  ಮೋಟಾರು ವಾಹನ ಕಾಯ್ದೆಯ ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!