ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ ಕೆಲವು ದಿನ 17 ಸಾವಿರದ ಗಡಿದಾಟುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗಿದ್ದು ನಿನ್ನೆ 11,793 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಒಟ್ಟು 96,700 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ದೈನಂದಿನ ಪಾಸಿಟಿವಿಟಿ ದರವು 2.49%ಕ್ಕೆ ಕುಸಿದಿದೆ. ಒಟ್ಟು 9,486 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಚೇತರಿಕಾ ದರವು 98.57%ದಷ್ಟಿದೆ.
ಒಟ್ಟು 197.31 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದೆ.