ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಆಡಿಯೋ ವಾಗ್ಧಾಳಿಗಳು ಹೆಚ್ಚಾಗುತ್ತಿದೆ. ನಿನ್ನೆ ಕುಮಾರಸ್ವಾಮಿ ಆಡಿಯೋವನ್ನು ಡಿ.ಕೆ ಸುರೇಶ್ ಬಿಡುಗಡೆ ಮಾಡಿದ್ದರು. ಇದಕ್ಕೆ ಟಾಂಗ್ ನೀಡುವಂತೆ ಇಂದು ಸಿ.ಪಿ ಯೋಗೇಶ್ವರ್ ಮೆಗಾಸಿಟಿ ಕಳ್ಳ ಎಂದು ಡಿ.ಕೆ ಸುರೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.
ಯೋಗೇಶ್ವರ್ ಬಗ್ಗೆ ಡಿಕೆ ಸುರೇಶ್ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಮತದಾರರ ಬಳಿ ಹೆಚ್ಚಾಗಿ ಹೋಗಬಾರದು. ಮತದಾನಕ್ಕೆ ಕೆಲ ದಿನ ಇರುವಾಗ ಹೋಗಿ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದ ಆಡಿಯೋವೊಂದನ್ನು ಡಿಕೆ ಸುರೇಶ್ ಬಹಿರಂಗಪಡಿಸಿ ಟೀಕಿಸಿದ್ದರು.