ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೈಫೈ ಏರಿಯಾ ಕಮರ್ಷಿಯಲ್ ಸ್ಟ್ರೀಟ್ ಒಳಗಡೆಗೆ ಆಟೋ ಮತ್ತು ಸರಕು ವಾಹನಗಳ ಪ್ರವೇಶವನ್ನು ನಿಷೇಧ ಹೇರಲಾಗಿದೆ.
ಶಿವಾಜಿನಗರ ಸಂಚಾರಿ ಪೊಲೀಸರು ಕಮರ್ಷಿಯಲ್ ಸ್ಟ್ರೀಟ್‌ಗೆ ಎಂಟ್ರಿ ಆಗುವ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಬ್ಯಾನರ್ ಹಾಕಿದ್ದಾರೆ. ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶ ನಿಷೇಧ ಆಗಿದೆ.
ವೀಕೆಂಡ್ ಅಲ್ಲಿ ದೇಶ, ವಿದೇಶಿಗರು ಓಡಾಟ ಮಾಡುತ್ತಾರೆ. ಆದರೆ ಆಟೋ ಮತ್ತು ಸರಕು ವಾಹನಗಳ ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಿಷೇಧದ ಮಧ್ಯೆ ಕೂಡ ಆಟೋ ಮತ್ತು ಸರಕು ವಾಹನಗಳು ಹೋದರೆ ನೋ ಎಂಟ್ರಿ ಕೇಸ್ ಹಾಕಿ 500 ರೂ. ದಂಡ ಹಾಕಲಿದ್ದಾರೆ.