ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕ್ರೇಜಿಸ್ಟಾರ್ ಪುತ್ರ ಮನೋರಂಜನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರೇಜಿಸ್ಟಾರ್ ರವಿಚಂದ್ರನ್​ ಅವರ ದೊಡ್ಡ ಮಗ ಮನೋರಂಜನ್ ಮದುವೆಯನ್ನು ಬಹಳ ಅದ್ಧೂರಿಯಾಗಿ ಬೆಂಗಳೂರಿನ ತ್ರಿಪುರ ವಾಸಿನಿಯಲ್ಲಿ ನೆರವೇರಿಯಿತು.
ರವಿಚಂದ್ರನ್ ಹಾಗು ಪತ್ನಿ ಸುಮತಿ ಆಸೆಯಂತೆ ಅವರು ನೋಡಿ ಒಪ್ಪಿರುವ ಹುಡುಗಿಯನ್ನು ಮನೋರಂಜನ್ ವರಿಸಿದ್ದಾರೆ. ಈ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಮದುವೆ ಬಗ್ಗೆ ಮಾತನಾಡಿರೋ ಮನೋರಂಜನ್, ಇದು ಅರೆಂಜ್‌ ಮ್ಯಾರೇಜ್, ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27 ರ ಒಳಗೆಯೇ ನಡೆಯುತ್ತದೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ. ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು. ನಾನು ನಟನಾಗಿರುವುದರಿಂದ, ಅವರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಸಮಯ ನೀಡುತ್ತೇನೆ.‌ ಅಪ್ಪ- ಅಮ್ಮನ ಆಸೆಯಂತೆ ನಾವು ಜೀವನ ನಡೆಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!