Wednesday, March 29, 2023

Latest Posts

ಕ್ರಿಕೆಟರ್ ದೀಪಕ್​ ಚಾಹರ್ ಪತ್ನಿಗೆ 10 ಲಕ್ಷ ರೂ. ವಂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್​ ತಂಡದ ವೇಗದ ಬೌಲರ್​ ದೀಪಕ್​ ಚಾಹರ್ (Deepak Chahar)​ ಪತ್ನಿ ಜಯಾ ಭಾರಧ್ವಾಜ್​ಗೆ 10 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.

ಹೈದಾರಾಬಾದ್ ಮೂಲದ ಇಬ್ಬರು ಹಣ ಪಡೆದುಕೊಂಡು ವಾಪಸ್​ ಕೊಟ್ಟಿಲ್ಲ ಎಂಬುದಾಗಿ ಆಗ್ರಾದ ಹರಿ ಪರ್ವತ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ದ್ರುವ ಪರೀಕ್​ ಹಾಗೂ ಕಮ್ಲೇಶ್​ ಪರೀಕ್​ ಮೋಸ ಮಾಡಿದ ಆರೋಪಿಗಳು. ಇವರಲ್ಲಿ ಒಬ್ಬ ಹೈದರಾಬಾದ್​ ಕ್ರಿಕೆಟ್​ ಸಂಸ್ಥೆಯ ಅಧಿಕಾರಿಯೂ ಆಗಿದ್ದರು.

ದೂರಿನ ಪ್ರಕಾರ ಆರೋಪಿಗಳು 2022ರ ಅಕ್ಟೋಬರ್​ 7ರಂದು 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಅದನ್ನು ಇನ್ನೂ ವಾಪಸ್​ ಕೊಟ್ಟಿಲ್ಲ ಎಂದು ಹೇಳಲಾಗಿದೆ.

ದೀಪಕ್​ ಚಾಹರ್​ ಹಾಗೂ ಜಯ ಭಾರಧ್ವಾಜ್ 2022ರ ಜೂನ್ 2ರಂದು ವಿವಾಹವಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!