Wednesday, March 29, 2023

Latest Posts

ಬಿಹಾರ ಬದಲು ರಾಜಸ್ಥಾನದಲ್ಲಿ ಪ್ರಯಾಣಿಕನನ್ನು ಇಳಿಸಿದ ಇಂಡಿಗೋ ವಿಮಾನ: DGCAಯಿಂದ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ್ ನ ಪಾಟ್ನಾಗೆ ಹೋಗಬೇಕಿದ್ದ ಪ್ರಯಾಣಿಕ ರಾಜಸ್ತಾನದ ಉದಯಪುರಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ವಿರುದ್ಧ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ತನಿಖೆಗೆ ಆದೇಶಿಸಿದೆ.

ಜನವರಿ 30 ರಂದು (ಸೋಮವಾರ) ಘಟನೆ ನಡೆದಿದ್ದು, ಪ್ರಯಾಣಿಕನನ್ನು ಮರುದಿನ ಹೋಗಬೇಕಿದ್ದ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಅಫ್ಸರ್ ಹುಸೇನ್ ಎಂಬ ಪ್ರಯಾಣಿಕ ಇಂಡಿಗೋ ಫ್ಲೈಟ್ 6E-214 ಮೂಲಕ ಪಾಟ್ನಾಗೆ ಟಿಕೆಟ್ ಕಾಯ್ದಿರಿಸಿದ್ದರು. ಜನವರಿ 30 ರಂದು ನಿಗದಿತ ವಿಮಾನವನ್ನುಏರಲು ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ್ದರು. ಆದರೆ ಅವರು ತಪ್ಪಾಗಿ ಇಂಡಿಗೋದ ಉದಯಪುರದ 6E-319 ವಿಮಾನವನ್ನು ಹತ್ತಿದ್ದನು. ಉದಯಪುರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರವೇ ಪ್ರಯಾಣಿಕರಿಗೆ ತಾವು ತಪ್ಪಾಗಿ ಬೇರೆ ವಿಮಾನದಲ್ಲಿ ಬಂದಿರುವುದು ಬೆಳಕಿಗೆ ಬಂದಿದೆ.

ನಂತರ ಉದಯಪುರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ವಿಮಾನಯಾನ ಸಂಸ್ಥೆಯು ಜನವರಿ 31 ರಂದು ಪಾಟ್ನಾಕ್ಕೆ ಕಳುಹಿಸಿಕೊಟ್ಟರು.

ಇದೀಗ ಈ ಕುರಿತು ಡಿಜಿಸಿಎ ಅಧಿಕಾರಿ ವರದಿ ಕೇಳಿದ್ದು, ನಾವು ಈ ವಿಷಯದ ಬಗ್ಗೆ ವರದಿಯನ್ನು ಕೇಳುತ್ತಿದ್ದೇವೆ. ವಿಮಾನಯಾನ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

ಪ್ರಯಾಣಿಕರ ಬೋರ್ಡಿಂಗ್ ಪಾಸ್ ಅನ್ನು ಏಕೆ ಸಂಪೂರ್ಣವಾಗಿ ಸ್ಕ್ಯಾನ್ ಮಾಡಿಲ್ಲ ಮತ್ತು ನಿಯಮದ ಪ್ರಕಾರ ಬೋರ್ಡಿಂಗ್ ಪಾಸ್‌ಗಳನ್ನು ಬೋರ್ಡಿಂಗ್‌ಗೆ ಮೊದಲು ಎರಡು ಪಾಯಿಂಟ್‌ಗಳಲ್ಲಿ ಪರಿಶೀಲಿಸಿದಾಗ ಅವರು ಹೇಗೆ ತಪ್ಪಾದ ವಿಮಾನವನ್ನು ಹತ್ತಿದರು ಎಂದು ಡಿಜಿಸಿಎ ಕೇಳಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!