ಮಹೇಂದ್ರ ಸಿಂಗ್ ಧೋನಿ ಮೊಣಕಾಲು ನೋವಿಗೆ ರೋಡ್ ಸೈಡ್ 40 ರೂ. ಚಿಕಿತ್ಸೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ವಿದೇಶಕ್ಕೆ ಹಾರುವ ಸೆಲೆಬ್ರಿಟಿಗಳು, ಸ್ಟಾರ್‌ಗಳ ನಡುವೆ ಟೀಮ್ ಇಂಡಿಯಾದ ಮಾಜಿ ಸಾರಥಿ ಮಹೇಂದ್ರ ಸಿಂಗ್ ಧೋನಿ ತಮ್ಮ ಸಹಿಸಲಾರದ ಮೊಣಕಾಲು ನೋವಿಗೆ ರಸ್ತೆ ಬದಿಯ ನಾಟಿ ವೈದ್ಯರಿಂದ ಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ!

ಅಂದಹಾಗೆ ಇವರು ಚಿಕಿತ್ಸೆಗೆ ಖರ್ಚು ಮಾಡುತ್ತಿರುವುದು ಕೇವಲ 40 ರೂ. ಅಂದರೆ ನೀವು ನಂಬಲೇ ಬೇಕು. ರಾಂಚಿಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ಕಟಿಂಗ್‌ಕೆಲಾದಲ್ಲಿ ಬಂಧನ್ ಸಿಂಗ್ ಎಂಬವರು ಕಳೆದ 25 ವರ್ಷಗಳಿಂದ ಮರದ ಕೆಳಗೆ ಕುಳಿತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಧೋನಿ ಇಲ್ಲಿಗೆ ಬಂದು ಔಷಧ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕು ದಿನಕ್ಕೊಮ್ಮೆ ಇಲ್ಲಿಗೆ ಬರುವ ಧೋನಿ, ರಸ್ತೆ ಬದಿ ಚಿಕಿತ್ಸೆ ಪಡೆದುಕೊಳ್ಳುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇತರೆ ರೋಗಿಗಳಂತೆ ಧೋನಿ ಕೂಡಾ ಇಲ್ಲಿಗೆ ಬರುತ್ತಾರೆ. ಅವರಲ್ಲಿ ಯಾವುದೇ ರೀತಿಯ ಅಹಂಕಾರ ನಾನು ಕಂಡಿಲ್ಲ. ಕಾರಿನಲ್ಲಿ ಕುಳಿತುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅನೇಕರು ಬಂದು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎನ್ನುತ್ತಾರೆ ವೈದ್ಯ ಬಂಧನ್ ಸಿಂಗ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!