ಈಕೆ 73ವರ್ಷದ ವೃದ್ಧೆ ಅಲ್ಲ, 73ವರ್ಷದ ಯುವತಿ: ವಿಡಿಯೋ ನೋಡಿದ್ರೆ ನೀವೂ ಹಾಗೆ ಅಂತೀರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂವತ್ತು, ನಲವತ್ತು ವರ್ಷಕ್ಕೇ ಮೈ-ಕೈ ನೋವು, ಸೊಂಟ ನೋವು, ಅಯ್ಯೋ ಆಗಿಲ್ಲ, ಅಮ್ಮಾ ಸುಸ್ತು ಅನ್ನೋ ಈ ಕಾಲದಲ್ಲಿ  ಹರಿಯಾಣದ ಈ 73 ವರ್ಷದ ಅಜ್ಜಿ ಒಳ್ಳೆ ಯುವಕರ ಹಾಗೆ ಫುಲ್‌ ಆಕ್ಟೀವ್‌ ಆಗಿದ್ದಾರೆ. ಆಕೆಯ ಸಾಹಸಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೃದ್ಧೆಯ ಸಾಹಸವನ್ನು ನೋಡಿದ ನೆಟ್ಟಿಗರು ಆಕೆ ಮುದುಕಿ ಅಲ್ಲ 73 ವರ್ಷದ ಯುವತಿ ಅಂತಿದಾರೆ.

ಈ ಅಜ್ಜಿಯ ಹೆಸರು ಓಂವತಿ, ಹರಿಯಾಣದ ಬಂದೇಪುರ ಗ್ರಾಮದಲ್ಲಿ ವಾಸಿಸುವ ಇವರು ಇತ್ತೀಚೆಗಷ್ಟೇ ಸೇತುವೆ ಮೇಲಿಂದ    ಗಂಗಾ ನದಿಗೆ ಹಾರಿದ್ದಾರೆ.  ಹರಿದ್ವಾರದ ಹರ್ ಕಿ ಪೌರಿಯಲ್ಲಿ 40 ಅಡಿ ಎತ್ತರದ ಸೇತುವೆಯಿಂದ ರಭಸವಾಗಿ ಹರಿಯುತ್ತಿರುವ ನದಿಗೆ ಹಾರಿ ದಡಕ್ಕೆ ಈಜಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ವಿಡಿಯೋ ನೋಡಿದ ಕೆಲವರು  ವೃದ್ಧೆಯ ಧೈರ್ಯವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಆಕೆಯ ಸುರಕ್ಷತೆಯ ಕಾಳಜಿ ತೋರಿದ್ದಾರೆ.

ಅಷ್ಟೇ ಅಲ್ಲ ನೃತ್ಯ ಅಂದರೆ ಈ ಅಜ್ಜಿಗೆ ಬಹಳ ಇಷ್ಟವಂತೆ, ಆಕೆಯ ನೃತ್ಯದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಾವ್..ಓಂವತಿ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!