ಒಂದೇ ಇನ್ನಿಂಗ್ಸ್‌ ನಲ್ಲಿ ಬರೋಬ್ಬರಿ 410 ರನ್‌ ಸಿಡಿಸಿದ ಯುವ ಆಟಗಾರ! ಲಾರಾ ರೆಕಾರ್ಡ್‌ ಸೇಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗ್ಲಾಮೊರ್ಗನ್‌ಗೆ ತಂಡದ ಬ್ಯಾಟ್ಸ್‌ ಮನ್‌ ಸ್ಯಾಮ್ ನಾರ್ಥ್‌  ಈಸ್ಟ್ ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 400 ರನ್‌ ಸಿಡಿಸುವ ಮೂಲಕ ಕ್ರಿಕೆಟ್‌ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಸ್ಯಾಮ್‌ ಅಮೋಘ‌ ಇನ್ನಿಂಗ್ಸ್‌ ಬಲದಿಂದ ಗ್ಲಾಮೊರ್ಗಾನ್ ತಂಡವು ಲೀಸೆಸ್ಟರ್‌ಶೈರ್ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 795 ರನ್‌ ಗಳಿಸಿ  ಡಿಕ್ಲೇರ್ ಮಾಡಿಕೊಂಡಿತು. ಇದರಲ್ಲಿ ಸ್ಯಾಮ್‌ ಒಬ್ಬರೇ ಅಜೇಯವಾಗಿ 410 ರನ್‌ ಕಲೆಹಾಕಿದರು.  450 ಎಸೆತಗಳ ಅವರ ಇನ್ನಿಂಗ್ಸ್‌ ನಲ್ಲಿ 45 ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್‌ಗಳಿದ್ದವು.
ಇದಕ್ಕೂ ಮುನ್ನ 1994 ರಲ್ಲಿ ಒಂಗ್ಲಿಷ್ ಕೌಂಟಿ ಪಂದ್ಯದಲ್ಲಿ‌ ವಾರ್ವಿಕ್‌ ಷೈರ್‌ ಪರ ಬ್ರಿಯಾನ್ ಲಾರಾ 501 ರನ್‌ ಕಲೆಹಾಕಿದ್ದು ಈವರೆಗಿನ ವಿಶ್ವದಾಖಲೆಯ ವೈಯಕ್ತಿಕ ಸ್ಕೋರ್ ಆಗಿದೆ. ಗ್ಲಾಮೊರ್ಗಾನ್ ಡಿಕ್ಲೇರ್‌ ಮಡಿಕೊಂಡಿದ್ದರಿಂದ ಈ ದಾಖಲೆ ಮುರಿಯಲು ಸ್ಯಾಮ್‌ ಗೆ ಅವಕಾಶ ಸಿಗಲಿಲ್ಲ.
ವೆಸ್ಟ್‌ ಇಂಡಿಸ್‌ ಕ್ರಿಕೆಟ್‌ ದಂತಕಥೆ ಬ್ರಿಯಾನ್‌ ಲಾರಾ 2004 ರಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 400 ರನ್ ಗಳಿಸಿದ್ದು ಟೆಸ್ಟ್‌ ಕ್ರಿಕೆಟ್ ನಲ್ಲಿ ಈವರೆಗಿನ ರೆಕಾರ್ಡ್ ಆಗಿದೆ. ಈ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಂಟು ಆಟಗಾರರು ಮಾತ್ರ 400 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸ್ಯಾಮ್‌ ರದ್ದು ಸಾರ್ವಕಾಲಿಕ ಒಂಬತ್ತನೇ ಗರಿಷ್ಠ ಮೊತ್ತವಾಗಿದೆ.
ಲಾರಾ ಅವರಲ್ಲದೆ, ಆರ್ಚೀ ಮ್ಯಾಕ್‌ಲಾರೆನ್ (424) ಮತ್ತು 1988 ರಲ್ಲಿ ಗ್ರೇಮ್ ಹಿಕ್ (405) ಇಂಗ್ಲಿಷ್ ಕೌಂಟಿ ಪಂದ್ಯಾವಳಿಯಲ್ಲಿ  400-ಪ್ಲಸ್ ರನ್‌ ಕಲೆಹಾಕಿದ ಕ್ರಿಕೆಟಿಗರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!