ಸರ್ಜರಿಗೆ ಒಳಗಾದ ಕ್ರಿಕೆಟಿಗ ಮೊಹಮ್ಮದ್ ಶಮಿ: ಶೀಘ್ರ ಚೇತರಿಕೆಗೆ ಪ್ರಧಾನಿ ಮೋದಿ ಹಾರೈಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಜರಿಗೆ ಒಳಗಾಗಿ ಆಸ್ಪತ್ರೆ ಸೇರಿರುವ ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ (Mohammed Shami) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.

ದೀರ್ಘಕಾಲದ ಗಾಯದಿಂದಾಗಿ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್ 2024 ಸೇರಿದಂತೆ ಮುಂಬರುವ ಹಲವಾರು ಟೂರ್ನಿಗಳಿಂದ ಹೊರಗುಳಿದಿರುವ ಶಮಿ ಲಂಡನ್​ನಲ್ಲಿ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಅದರ ಚಿತ್ರವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದ್ದರು. ಅದನ್ನು ನೋಡಿದ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ, ನಿಮಗೆ ಬಹಳ ಮುಖ್ಯವಾದ ಈ ಗಾಯವನ್ನು ನೀವು ಧೈರ್ಯದಿಂದ ಜಯಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ’ ಎಂದು ಬರೆದಿದ್ದಾರೆ.

ಪ್ರಧಾನಿಯವರ ನಡೆಗೆ ಮೊಹಮ್ಮದ್​ ಶಮಿ ಮಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿಯವರ ದಯೆ ಮತ್ತು ಚಿಂತನಶೀಲತೆಯನ್ನು ಶಮಿ ಮೆಚ್ಚಿದರು. ಪುನಶ್ಚೇತನ ಅವಧಿಯಲ್ಲಿ ಪ್ರಧಾನಿಯವರ ಬೆಂಬಲದ ಮಹತ್ವವನ್ನು ವಿವರಿಸಿದರು. ಆದಷ್ಟು ಶೀಘ್ರ ಚೇತರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

‘ನಾನು ಯಶಸ್ವಿಯಾಗಿ ಪಾದದ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಸಂಪೂರ್ಣವಾಗಿ ಗುಣಮುಖನಾಗಲು ಒಂದಷ್ಟು ಸಮಯ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸವಿದೆ’ ಎಂದು ಫೋಟೊಗಳ ಸಮೇತ ಮೊಹಮ್ಮದ್‌ ಶಮಿ ಪೋಸ್ಟ್‌ ಮಾಡಿದ್ದಾರೆ. ಇವರ ಪೋಸ್ಟ್‌ಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಶೀಘ್ರವೇ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ತಮ್ಮ  ಬೌಲಿಂಗ್​ ದಾಳಿಯಿಂದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ವಿಶ್ವಕಪ್​ ಬಳಿಕ ಶಮಿ ಗಾಯದ ಸಮಸ್ಯೆಯಿಂದ ಭಾರತ ಪರ ಆಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!