ರಾಜ್ಯಸಭಾ ಚುನಾವಣೆಯ ಫಲಿತಾಂಶ: 3 ಸೀಟು ಗೆದ್ದು ಬೀಗಿದ ಕಾಂಗ್ರೆಸ್‌, ಬಿಜೆಪಿಗೆ 1 ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನಿಂದ ಜಿಸಿ ಚಂದ್ರಶೇಖರ್‌, ನಾಸೀರ್‌ ಹುಸೇನ್‌, ಅಜಯ್‌ ಮಾಕೇನ್‌ ಸ್ಪರ್ಧಿಸಿ ಗೆಲುವು ಕಂಡರೇ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣಸಾ ಭಾಂಡಗೆ ಅವರು ಗೆಲವು ಕಂಡಿದ್ದಾರೆ.

ಜೆಡಿಎಸ್‌ ಮೈತ್ರಿಯಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರು, ಆದರೆ ಅವರು ಸೋಲನ್ನು ಕಂಡಿದ್ದಾರೆ.

ಅಜಯ್ ಮಾಕನ್ -47, ನಾಸೀರ್ ಹುಸೇನ್ – 46, ಜಿ.ಸಿ. ಚಂದ್ರಶೇಖರ – 45, ನಾರಾಯಣಸಾ ಭಾಂಡಗೆ – 48, ಕುಪೇಂದ್ರ ರೆಡ್ಡಿ – 35 ಮತಗಳನ್ನು ಗಳಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 6 ರಲ್ಲಿ ಮತದಾನ ನಡೆದಿತ್ತು, 223 ಮತಗಳ ಪೈಕಿ 222 ಮಂದಿ ಮತದಾನ ಮಾಡಿದ್ದಾರೆ. ಶಾಸಕ ಶಿವರಾಜ್ ಹೆಬ್ಬಾರ್ ಮಾತ್ರ ಮತದಾನ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ.ಕಾಂಗ್ರೆಸ್ ನ 137 ಶಾಸಕರು, ಬಿಜೆಪಿಯ 65, ಜೆಡಿಎಸ್ ನ 19 ಮಂದಿ ಹಾಗೂ ಪಕ್ಷೇತರರ ನಾಲ್ವರು ಮಂದಿ ಶಾಸಕರು ಮತ ಚಲಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!