Saturday, March 25, 2023

Latest Posts

SHOCKING | ಸೆಲ್ಫಿ ತೆಗೆದುಕೊಳ್ಳೋಕೆ ನಿರಾಕರಿಸಿದ ಕ್ರಿಕೆಟರ್ ಪೃಥ್ವಿ ಶಾ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಲಬ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳೋಕೆ ನಿರಾಕರಿಸಿದ ಕ್ರಿಕೆಟರ್ ಪೃಥ್ವಿ ಶಾ ಅವರ ಕಾರಿನ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

ಮುಂಬೈನ ಸಹಾರಾ ಸ್ಟಾರ್ ಹೋಟೆಲ್ ಮ್ಯಾನ್ಷನ್ ಕ್ಲಬ್‌ನಲ್ಲಿ ಪೃಥ್ವಿ ಶಾ ಪಾರ್ಟಿ ಮಾಡುತ್ತಿದ್ದು, ಈ ವೇಳೆ ಯುವಕರಾದ ಸನಾ ಗಿಲ್ ಹಾಗೂ ಶೋಬಿತ್ ಠಾಕೂರ್ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಸೆಲ್ಫಿಗೆ ನಿರಾಕರಿಸಿದ್ದಕ್ಕೆ ಕೋಪಗೊಂಡು ದಾಳಿ ನಡೆಸಿದ್ದಾರೆ.

ಒಂದು ಬಾರಿ ಸೆಲ್ಫಿ ತೆಗೆಸಿಕೊಂಡ ನಂತರ ಮತ್ತೆ ಮತ್ತೆ ಬಂದು ಫೋಟೊಗೆ ಪೋಸ್ ನೀಡುವಂತೆ ಯುವಕರು ಒತ್ತಾಯಿಸಿದ್ದಾರೆ. ನಿರಾಕರಿಸಿದ್ದನ್ನು ಕಂಡ ಹೊಟೇಲ್ ಮ್ಯಾನೇಜರ್ ಇಬ್ಬರನ್ನು ಹೊಟೇಲ್‌ನಿಂದ ಹೊರದಬ್ಬಿದ್ದಾರೆ. ಇದರಿಂದ ಕೋಪಗೊಂಡ ಯುವಕರು ತಮ್ಮ ಸ್ನೇಹಿತರಿಗೆ ಕರೆ ಮಾಡಿದ್ದು, ಎಂಟು ಮಂದಿ ಗುಂಪು ಹೊಟೇಲ್ ಹೊರಗೆ ಕಾಯುತ್ತಿತ್ತು ಎನ್ನಲಾಗಿದೆ.

ಬಳಿಕ ಜೋಗೇಶ್ವರಿ ಲಿಂಕ್ ರೋಡರ್ ಲೋಟಸ್ ಗ್ಯಾಸ್ ಸ್ಟೇಷನ್ ಬಳಿ ಕಾರ್‌ನ್ನು ಹಿಂಬಾಲಿಸಿ ಬೇಸ್ ಬಾಲ್ ಬ್ಯಾಟ್‌ನಿಂದ ಕಾರಿನ ಗಾಜು ಒಡೆದಿದ್ದಾರೆ. ಆದರೆ ಕಾರ್‌ನಲ್ಲಿ ಪೃಥ್ವಿ ಶಾ ಇರಲಿಲ್ಲ. ಮುಂಜಾಗ್ರತೆಯಿಂದ ಪೃಥ್ವಿ ಬೇರೆ ಕಾರ್‌ನಲ್ಲಿ ಮನೆಗೆ ತೆರಳಿದ್ದರು.

ಎಂಟು ಜನರ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!