Tuesday, March 28, 2023

Latest Posts

2 ಗೂಡ್ಸ್ ರೈಲುಗಳ ಮುಖಾಮುಖಿ ಡಿಕ್ಕಿ: ಯಾವುದೇ ಪ್ರಾಣಾಪಾಯವಿಲ್ಲ ಎಂದ ರೈಲ್ವೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುರುವಾರ ಬೆಳಗ್ಗೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಎರಡು ಸರಕುಗಳನ್ನು ಸಾಗಿಸುತ್ತಿದ್ದ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಿಂದಾಗಿ ಪ್ರಯಾಗ್‌ರಾಜ್ ರೈಲ್ವೆ ಹಳಿಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.

ಒಂದೇ ಹಳಿಯಲ್ಲಿ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದು ಮುಂಜಾನೆ 5.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಗೂಡ್ಸ್ ರೈಲಿನ ಪೈಲಟ್ ಗಾಯಗೊಂಡಿದ್ದಾರೆ. ವೇಗದ ಡಿಕ್ಕಿಯಿಂದಾಗಿ ಎರಡು ರೈಲುಗಳ ಬೋಗಿಗಳು ಹಳಿತಪ್ಪಿದವು ತಪ್ಪು ಆದರೆ, ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹಳಿಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಆ ಸ್ಥಳದಲ್ಲಿ ತೆರವು ಕಾರ್ಯ ನಡೆಯುತ್ತಿದ್ದು, ಲಕ್ನೋ-ವಾರಣಾಸಿ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಇತರ ರೈಲುಗಳ ಮಾರ್ಗ ಬದಲಿಸಲಾಗಿದೆ.

Wagons derail after two goods trains collide in UP's Sultanpur

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!