ಹೊಸದಿಗಂತ ಡಿಜಿಟಲ್ ಡೆಸ್ಕ್;
ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ಅವರಿಗೆ ಮುಂಬೈನ ಕೌಟುಂಬಿಕ ನ್ಯಾಯಾಲಯವು ಗುರುವಾರ ಡಿವೋರ್ಸ್ ಮಂಜೂರು ಮಾಡಿದೆ.
ಧನಶ್ರೀ ಅವರಿಂದ ಎರಡೂವರೆ ವರ್ಷದಿಂದ ದೂರವಾಗಿದ್ದ ಚಹಲ್ ಅಧಿಕೃತವಾಗಿ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ.
ಮಾರ್ಚ್ 22ರಿಂದ ಐಪಿಎಲ್ ಹಣಾಹಣಿ ಆರಂಭವಾಗುವ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಡಿವೋರ್ಸ್ ರಾದ್ಧಾಂತದಿಂದ ನನಗೆ ಐಪಿಎಲ್ ಕಡೆ ಗಮನಹರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ವಿಚ್ಛೇದನದ ಅರ್ಜಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದ್ದರು.
ಚಹಲ್ ಅವರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಫ್ಯಾಮಿಲಿ ನ್ಯಾಯಾಲಯಕ್ಕೆ ಡಿವೋರ್ಸ್‌ಗೆ ಸಂಬಂಧಪಟ್ಟಂತೆ ಅಂತಿಮ ಆದೇಶ ನೀಡುವಂತೆ ಸೂಚನೆ ನೀಡಿತ್ತು. ಬಾಂಬೆ ಹೈಕೋರ್ಟ್ ಆದೇಶದಂತೆ ಬಾಂದ್ರಾ ಫ್ಯಾಮಿಲಿ ಕೋರ್ಟ್ ಇಂದು ಅಂತಿಮ ಆದೇಶ ನೀಡಿದೆ.
ಫ್ಯಾಮಿಲಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪರಸ್ಪರ ಒಪ್ಪಿಗೆ ಹಾಗೂ ಜೀವನಾಂಶ ನೀಡಲು ಯಜುವೇಂದ್ರ ಚಹಲ್ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಡಿವೋರ್ಸ್ ಮಂಜೂರು ಮಾಡಲಾಗಿದೆ.
ಯಜುವೇಂದ್ರ ಚಹಲ್ ಅವರು ಮಾಜಿ ಪತ್ನಿಗೆ 60 ಕೋಟಿ ರೂಪಾಯಿ ಜೀವನಾಂಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಚಹಲ್, ಧನುಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಜೀವನಾಂಶ ನೀಡಲು ಕೋರ್ಟ್ ಆದೇಶ ನೀಡಿದೆ.
4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶದಲ್ಲಿ ಈಗಾಗಲೇ 2 ಕೋಟಿ 37 ಲಕ್ಷ ರೂಪಾಯಿ ಹಣವನ್ನು ಯಜುವೇಂದ್ರ ಚಹಲ್, ಧನಶ್ರೀಗೆ ನೀಡಿದ್ದಾರಂತೆ. ಬಾಕಿ ಹಣವನ್ನು ನೀಡದೆ ಇರೋದಕ್ಕಾಗಿ ಅಧಿಕೃತವಾಗಿ ಡಿವೋರ್ಸ್ ಆದೇಶ ಆಗಿರಲಿಲ್ಲ. ಇಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ಯಜುವೇಂದ್ರ ಚಹಲ್- ಧನುಶ್ರೀ ವರ್ಮಾ ಅಧಿಕೃತವಾಗಿ ಬೇರೆ, ಬೇರೆ ಆಗಿದ್ದಾರೆ.