ಶ್ರದ್ಧಾ ಹತ್ಯೆಯ ಕತೆಯನ್ನೇ ತಿರುಚಿದ ‘ಕ್ರೈಮ್ ಪ್ಯಾಟ್ರೊಲ್’- ಅಫ್ತಾಬ್ ಹೆಸರಿಲ್ಲಿ ಮಿಹಿರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾವಾಕರ್‌ ಹತ್ಯೆ ಪ್ರಕರಣದ ಬಗ್ಗೆ ಗೊತ್ತೇ ಇದೆ. ಮುಸ್ಲಿಂ ಹುಡುಗನೊಬ್ಬನ ಕಪಟ ಪ್ರೇಮದ ಜಾಲದಲ್ಲಿ ಸಿಲುಕಿದ ಶ್ರದ್ಧಾ ಅಮಾನುಷವಾಗಿ ಹತ್ಯೆಯಾಗಿ ಹೋದಳು. ಈ ಘಟನೆಯ ಬಗ್ಗೆ ನೀವೆಲ್ಲಾ ಅದಾಗಲೇ ಓದಿದ್ದೀರಿ. ಆದರೆ ಇಲ್ಲಿ ನಾವು ಹೇಳ ಹೊರಟಿರೋದು ಇಡೀ ದೇಶಕ್ಕೇ ತಿಳಿದಿರುವ ಶ್ರದ್ಧಾ ಹತ್ಯೆ ಪ್ರಕರಣವನ್ನು ತಿರುಚಿ, ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿರೋ ಜಾತ್ಯಾತೀತ ಸೋಗಲಾಡಿತನದ ಬಗ್ಗೆ. ಶ್ರದ್ಧಾ ಹತ್ಯೆಯ ಕುರಿತಾದ ಎಲ್ಲಾ ಕಟು ಸತ್ಯಗಳೂ ಜನರೆದುರು ತೆರೆದುಕೊಂಡಿರುವಾಗ, ಆ ಪ್ರಕರಣವನ್ನೇ ಬುಡಮೇಲು ಮಾಡಿ ಕೊಲೆಗಡುಕನಿಗೆ ಹಿಂದೂ ಹೆಸರು ಕೊಟ್ಟು ವೀಕ್ಷಕರನ್ನು ಹಾದಿ ತಪ್ಪಿಸಿದ ಬೂಟಾಟಿಕೆಯ ಬಗ್ಗೆ.

ಹೌದು, ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ʼಕ್ರೈಮ್‌ ಪ್ಯಾಟ್ರೋಲ್‌ʼ ಇಂಥದ್ದೊಂದು ಕೆಲಸ ಮಾಡಿದೆ. ಶ್ರದ್ಧಾ ಹತ್ಯೆಯನ್ನು ಮರುಸೃಷ್ಟಿಸಿ ಕಥೆಯೊಂದನ್ನೇನೋ ಹೆಣೆಯಲಾಯಿತು, ಆದರೆ ಅದರಲ್ಲಿನ ಹೆಸರುಗಳು ಮಾತ್ರ ಬದಲಾಗಿದ್ದವು. ಧಾರಾವಾಹಿಯು ಸತ್ಯಗಳನ್ನು ವಿರೂಪಗೊಳಿಸಿ ಬಲಿಪಶು ಮತ್ತು ಅಪರಾಧಿಯ ಧಾರ್ಮಿಕ ಗುರುತನ್ನು ಬದಲಾಯಿಸಿದೆ. ಶ್ರದ್ಧಾಳನ್ನು ಕ್ರೂರವಾಗಿ ಹತ್ಯೆಗೈದಿದ್ದ ಅಫ್ತಾಬ್‌ ಹೆಸರನ್ನು ಹಿಂದೂ ಹೆಸರು ʼಮಿಹಿರ್‌ʼಗೆ ಬದಲಾಯಿಸಿದ್ದರೆ, ಶ್ರದ್ಧಾಳ ಹೆಸರನ್ನು ‘ಅನ್ನಾ ಫೆರ್ನಾಂಡಿಸ್’ ಎಂಬ ಕ್ರಿಶ್ಚಿಯನ್‌ ಹೆಸರಿಗೆ ಬದಲಾಯಿಸಲಾಗಿದೆ. ಇದಲ್ಲದೇ ಕಳೆದ ವಾರ ಪ್ರಸಾರವಾದ ಈ ಸಂಚಿಕೆಯಲ್ಲಿ ಜೋಡಿಗಳು ಹಿಂದೂ ದೇವಸ್ಥಾನದಲ್ಲಿ ಮದುವೆಯಾದಂತೆ ತೋರಿಸಲಾಗಿದೆ.

ಶ್ರದ್ಧಾಳನ್ನು ಅಮಾನವೀಯವಾಗಿ ಕೊಂದು, ದೇಹವನ್ನು ಛಿದ್ರಗೊಳಿಸಿ, ಕೊನೆಗೆ ಆಕೆಯ ದೇಹ ಫ್ರಿಡ್ಜ್‌ ನಲ್ಲಿರುವಾಗಲೇ ಇನ್ನೋಬ್ಬಾಕೆಯನ್ನು ಪ್ರೇಮದ ಹೆಸರಲ್ಲಿ ಕರೆದುಕೊಂಡು ಬಂದ ಕ್ರೂರಿ ʼಅಫ್ತಾಬ್‌ʼ ಒಬ್ಬ ಮುಸ್ಲಿಂ ಎಂಬುದು ತೆರೆದ ಸತ್ಯವಾದರೂ ಈ ಸಂಚಿಕೆಯಲ್ಲಿ ಆತನನ್ನು ʼಮಿಹಿರ್‌ʼ ಎಂಬ ಹೆಸರಿನ ಒಬ್ಬ ಹಿಂದೂ ಹುಡುಗನನ್ನಾಗಿಸಲಾಗಿದೆ. ಅಲ್ಲದೇ ಅಫ್ತಾಬ್‌ ತಾಯಿಯನ್ನು ಒಬ್ಬ ಹಿಂದೂ ಸಂಪ್ರದಾಯಸ್ಥ ಮಹಿಳೆಯಂತೆ ತೋರಿಸಲಾಗಿದೆ. ಹೆಸರುಗಳೇ ಹೀಗಿದ್ದರೆ, ಕಥೆ ಮುಂದೇನಾಗಿರಬಹುದೆಂದು ಊಹಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!