ಸಂಗೀತ ಸಂಜೆ, ಸುಡುಮದ್ದು ಅಬ್ಬರದಲ್ಲಿ ’ಹೊಸವರ್ಷ’ ಸ್ವಾಗತಿಸಿಕೊಳ್ಳಲಿದೆ ಬೇಕಲ ಬೀಚ್ ಉತ್ಸವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲೇ ಮೊದಲ ಬಾರಿಗೆ ಕಾಸರಗೋಡು ಜಿಲ್ಲೆಯ ಬೇಕಲದಲ್ಲಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಬೀಚ್ ಉತ್ಸವದಲ್ಲಿ ಹೊಸವರ್ಷಾಚರಣೆ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಧ್ಯರಾತ್ರಿ 12ರ ವೇಳೆಗೆ ಸುಡುಮದ್ದುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ.

ಮಧ್ಯರಾತ್ರಿ 12ರವರೆಗೆ ಉತ್ಸವದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ಮುಂದುವರಿಯಲಿದೆ. ಇಂದು ಹಿನ್ನೆಲೆ ಗಾಯಕ ವಿಧು ಪ್ರತಾಪ್, ಗಜಾಲಿ ಮಾಂತ್ರಿಕ ಅಲೋಶ್ ಅವರುಗಳನ್ನು ಒಳಗೊಂಡಿರುವ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ಹೊಸ ವರ್ಷಾಚರಣೆ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!