ಕಾಂಗ್ರೆಸ್ ಶಾಸಕ ಜಮೀರ್ ಖಾನ್ ಸಹೋದರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್, ಅವರ ಸಹೋದರ ಮತ್ತು ಇತರರ ವಿರುದ್ಧ ವಂಚನೆ, ಅತಿಕ್ರಮಣ ಮತ್ತು ಬೆದರಿಕೆ ಸಂಬಂಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.
ಏಳನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಹಿಸ್ತಾ ನಜೀನ್ ಖಾನಮ್ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಜಮೀನು ಹೊಂದಿದ್ದು,ಆಗಸ್ಟ್ 4 ರಂದು ಕಾರ್ಮಿಕರಿಗೆ ಶೆಡ್ ನಿರ್ಮಿಸಲು ಹೋದಾಗ, ಖಾನ್ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಮತ್ತು ಇತರರು ತಮ್ಮ ಆಸ್ತಿಗೆ ಬುಲ್ಡೋಜರ್ ಮತ್ತು ಆಯುಧಗಳೊಂದಿಗೆ ಅತಿಕ್ರಮಣ ಮಾಡಿದರು ಮತ್ತು ಬೆದರಿಕೆ ಹಾಕಿದರು ಎಂದು ಎಫ್‌ಐಆರ್ ನಲ್ಲಿ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!