I.N.D.I.A ಒಕ್ಕೂಟದಲ್ಲಿ ಬಿಕ್ಕಟ್ಟು: ಪಶ್ಚಿಮ ಬಂಗಾಳದಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ಅನುಮತಿ ನಿರಾಕರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಶೀತಲಸಮರ ಹೆಚ್ಚುತ್ತಿದ್ದು, ಭಾರತ್ ಜೋಡೋ ನ್ಯಾಯ್ ಯಾತ್ರೆಯಡಿ ಪಶ್ಚಿಮ ಬಂಗಾಳ ತಲುಪಿದ್ದು, ಇಲ್ಲಿನ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆ ನಡೆಸಲು ರಾಹುಲ್ ಗಾಂಧಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಮಣಿಪುರದಲ್ಲಿ ಸಾರ್ವಜನಿಕ ಸಭೆ ನಡೆಸಲು ರಾಹುಲ್ ಗಾಂಧಿಗೆ ಅವಕಾಶ ನೀಡಲಿಲ್ಲ. ನಾವು ಮಣಿಪುರದ ಹೊರಗಿನ ಖಾಸಗಿ ಆಸ್ತಿಯಲ್ಲಿ ಸಾರ್ವಜನಿಕ ಸಭೆಯನ್ನ ಆಯೋಜಿಸಬೇಕಾಗಿತ್ತು. ಅಸ್ಸಾಂನಲ್ಲಿ, ಸರ್ಕಾರದ ಆದೇಶದ ಮೇರೆಗೆ ಹಲವಾರು ಪೊಲೀಸರು ಯಾತ್ರೆಯ ಮೇಲೆ ದಾಳಿ ನಡೆಸಿದರು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ರ್ಯಾಲಿ ನಡೆಸಲು ನಾವು ಅನುಮತಿ ಕೋರಿದ್ದೆವು. ಆದರೆ ಅದನ್ನು ತಿರಸ್ಕರಿಸಲಾಯಿತು. ಈ ನ್ಯಾಯ ಯಾತ್ರೆಯು ದೇಶದ ಎಲ್ಲ ಜನರಿಗಾಗಿ ಇದೆ. ಅದು ಯಾರ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!