ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೋರ್ಚುಗಲ್‌ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದ ಬಳಿಕ ಈಡಿಗ ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ ಪರ ಮುಂದಿನ ಎರಡೂವರೆ ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ (FIFA Worldcup) ಸೋತು ಹೊರನಡೆದಿದ್ದರು. ಈದೀಗ 2025ರ ವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ.
ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ಸಾಧಿಸಿದ್ದೇನೆ. ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!