ಭಾರತ ವಿರುದ್ಧ ಟೀಕೆ: ಮಾಲ್ಡೀವ್ಸ್ ಅಧ್ಯಕ್ಷರ ಪದಚ್ಯುತಿಗೆ ಪ್ರತಿಪಕ್ಷ ಹೋರಾಟ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದ ಬಳಿಕ ಮಾಲ್ಡೀವ್ಸ್ ಅಕ್ಷರಶಃ ಕಂಗಾಲಾಗಿದೆ. ಈಗಾಗಲೇ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ.

ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಾಲ್ಡೀವ್ಸ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಪದಚ್ಯುತಿಗೆ ಹೋರಾಟ ತೀವ್ರಗೊಳ್ಳುತ್ತಿದೆ. ಮಾಲ್ಡೀವ್ಸ್ ಸಂಸದ, ಅಲ್ಪಸಂಖ್ಯಾತ ಸಮುದಾಯದ ನಾಯಕ ಅಲಿ ಅಜೀಮ್, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಿದ್ದಾರೆ.

ದೇಶದ ವಿದೇಶಾಂಗ ನೀತಿಯ ಸ್ಥಿರಿತೆ ಎತ್ತಿಹಿಡಿಯಲು ಹಾಗೂ ನೆರೆ ರಾಷ್ಟ್ರವನ್ನು ಪ್ರತ್ಯೇಕವಾಗಿಡುವ ಪ್ರಯತ್ನವನ್ನು ತಡೆಯಲು ಸಮರ್ಥವಾಗಿದ್ದೇವೆ. ನಾವ ಪ್ರಜಾಪ್ರಭುತ್ವವಾದಿಗಳು. ಮಾಲ್ಡೀವ್ಸ್ ಸರ್ಕಾರದ ಕಾರ್ಯದರ್ಶಿಗಳೇ, ನೀವು ಅಧ್ಯಕ್ಷ ಮೊಹಮ್ಮದ್ ಮುಯಿಝಿ ಅದಿಕಾರದಿಂದ ಪದಚ್ಯುತಗೊಳಿಸಲು ಸಿದ್ದರಿದ್ದೀರಾ? ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಲು ಸಿದ್ದವಾಗಿದ್ದೀರಾ ಎಂದು ಅಲಿ ಅಜೀಮ್ ಪ್ರಶ್ನಿಸಿದ್ದಾರೆ.

ಮಾಲ್ಡೀವ್ಸ್ ಸರ್ಕಾರದ ಸಚಿವರು ಹಾಗೂ ಸರ್ಕಾರದ ನಡೆಯನ್ನು ಮಾಲ್ಡೀವ್ಸ್ ಮಾಜಿ ಅಧ್ಯಕ್ಷರು, ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತ ಮಾಲ್ಡೀವ್ಸ್ ವಿರುದ್ಧ ಭಾರತ ವಿದೇಶಾಂಗ ಸಚಿವಾಲಯ ಖಡಕ್ ಸಂದೇಶ ರವಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅಬರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ. ಸೋಮವಾರ ಮಾಲ್ಡೀವ್ಸ್‌ನ ಭಾರತದ ಪ್ರತಿನಿಧಿಯನ್ನು ಕರೆಸಿ ವಿದೇಶಾಂಗ ಸಚಿವಾಲಯ ಈ ಆಗ್ರಹವನ್ನು ವ್ಯಕ್ತಪಡಿಸಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!