ಸ್ವಂತ ಮಗುವನ್ನೇ ಕೊಂದ ತಾಯಿ: 6 ದಿನ ಗೋವಾ ಪೊಲೀಸ್ ಕಸ್ಟಡಿಗೆ

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದ ಹೋಟೆಲ್ ರೂಂ ನಲ್ಲಿ ತನ್ನ ಸ್ವಂತ ಮಗುವನ್ನೇ ಹತ್ಯೆಗೈದು, ಶವವನ್ನು ಸೂಟ್ ಕೇಸ್ ನಲ್ಲಿಟ್ಟು ಸಾಗಿಸುತ್ತಿದ್ದ ಹಂತಕಿ ತಾಯಿ ಸುಚನಾ ಸೇಠ್ ಅನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದು, ಬಳಿಕ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ 4 ವರ್ಷದ ಮಗನನ್ನು ಕೊಂದ ಹಂತಕಿ ತಾಯಿ ಸುಚನಾಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಗೋವಾ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣ ಸಂಬಂಧ ಗೋವಾದ ಮಾಪುಸಾ ಕೋರ್ಟ್ ಗೆ ಹಂತಕಿ ಸುಚನಾಳನ್ನು ಪೊಲೀಸರು ಒಪ್ಪಿಸಿದ್ದರು. ನಂತರ ವಿಚಾರಣೆ ನಡೆಸಿದ ಕೋರ್ಟ್ ಸುಚನಾಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!